ಕಾರ್ಕಳ:ಫೆಬ್ರವರಿ 19:ಶ್ರೀ. ಬಿ. ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರೌಢಶಾಲೆ ದುರ್ಗ ತೆಳ್ಳಾರು ಕಾರ್ಕಳ ತಾಲ್ಲೂಕು ಇಲ್ಲಿ ದಿನಾಂಕ: 15.03.2025 ರ ಶನಿವಾರದಂದು ವಕೀಲ ‘ವಾಸುದೇವ ಕಾಮತ್’ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಲಾಯಿತು.
ಕ್ರೀಡಾಂಗಣದ ನಿರ್ಮಾಣದ ಸಂಪೂರ್ಣ ದಾನಿಗಳು ಆಗಿರುವ ಶ್ರೀ ಕಮಲಾಕ್ಷ ಕಾಮತ್ ಕಾರ್ಕಳ CA ಇವರು ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ಕಮಲಾಕ್ಷ ಕಾಮತ್ ಕಾರ್ಕಳ CA ಇವರು ತಮ್ಮ ಉದ್ಘಾಟನಾ ನುಡಿಗಳೊಂದಿಗೆ ವಿದ್ಯಾರ್ಥಿಗಳಿಗೆ ಸಾಧನೆಗೆ ಬೇಕಾದ ಪರಿಶ್ರಮ, ಆಧ್ಯಾತ್ಮಿಕತೆ, ಗುರು ಹಿರಿಯರು ತಂದೆ ತಾಯಿಗಳ ಮೇಲಿನ ಗೌರವದ ಕುರಿತು ತಿಳಿ ಹೇಳಿದರು. ಕಾರ್ಕಳ ಶಿಕ್ಷಣ ಇಲಾಖೆಯ ಸಂಯೋಜಕರಾದ ಶ್ರೀ ಬಾಲಕೃಷ್ಣ ನಾಯಕ್ ಇವರು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಹೋಗಲಾಡಿಸುವ ಕುರಿತು ತಿಳಿ ಹೇಳಿದರು.
ಜಯಂತಿ ನಗರ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಪ್ರೇಮ ರವರು ಮಕ್ಕಳಿಗೆ ಶಾಲಾ ಪರಿಸರದ ಉತ್ತಮ ಅಂಶಗಳ ಬಗ್ಗೆ ತಿಳಿ ಹೇಳಿದರು. ಇನ್ನೋರ್ವ ಅತಿಥಿಗಳಾದ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರೂ, ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ಶ್ರೀಮತಿ ಸಾವಿತ್ರಿ ಮನೋಹರದವರು ಮಕ್ಕಳಿಗೆ ಶುಭ ಹಾರೈಕೆಯನ್ನು ತಿಳಿಸಿದರು. ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಣಪಯ್ಯ ರವರು ಹತ್ತನೇ ತರಗತಿಯ ಮಕ್ಕಳಿಗೆ ಪೆನ್ನುಗಳನ್ನು ನೀಡಿ ಹಾರೈಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸ್ಮಿತಾ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸುವುದರ ಜೊತೆಗೆ ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಕ್ರೀಡಾಂಗಣ ನಿರ್ಮಾಣದ ದಾನಿಗಳಾಗಿರುವ ಶ್ರೀ ಕಮಲಾಕ್ಷ ಕಾಮತ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿಜ್ಞಾನ ಶಿಕ್ಷಕಿ ಯಾದ ಶ್ರೀಮತಿ ಪ್ರಣಿಲಾರವರು ಅಭಿನಂದನ ಪತ್ರವನ್ನು ವಾಚಿಸಿದರು. ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಆದರ್ಶ ಜೈನರವರು ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಶೋಭಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಗಣಿತ ಶಿಕ್ಷಕಿಯಾದ ಶ್ರೀಮತಿ ರೇಖಾ ರವರು ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.