ಬ್ರಹ್ಮಾವರ: ಮಾರ್ಚ್ 18:ಸರಿಯಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ವಿಪರೀತ ಮಧ್ಯಪಾನ ಮಾಡುತ್ತಿದ್ದ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
ಮೃತ ವ್ಯಕ್ತಿ ಸಂತೋಷ್ (42) ಎಂಬುವವರು ಕಳೆದ 3-4 ದಿನಗಳಿಂದ ಮಧ್ಯಪಾನ ಮಾಡಿಕೊಂಡು ಬಂದು ತಾನು ಸಾಯುತ್ತೇನೆ,ಬದುಕುವುದಿಲ್ಲವೆಂದು ಹೇಳುತ್ತಿದ್ದವರು ದಿನಾಂಕ 16/03/2025 ರಂದು ಬೆಳಿಗ್ಗೆ 07:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯ ಮದ್ಯಾವಧಿಯಲ್ಲಿ ತಮ್ಮ ವಾಸದ ಮನೆಯ ಬಚ್ಚಲು ಕೋಣೆಯಲ್ಲಿ ಅಂಗಾತನೇ ಬಿದ್ದುಕೊಂಡಿದ್ದು, ಮರ್ಮಾಂಗದಿಂದ ರಕ್ತ ಸುರಿಯುತ್ತಿದ್ದು, ಕೂಡಲೇ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈಧ್ಯರು ಪರೀಕ್ಷಿಸಿ ಸಂತೋಷ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಸಂತೋಷ ರವರು ಮಾನಸಿಕ ಖಾಯಿಲೆಯಿಂದ, ಜೀವನದಲ್ಲಿ ಜೀಗುಪ್ಸೆಗೊಂಡು ಯಾವುದೋ ಹರಿತವಾದ ಆಯುಧದಿಂದ ತನ್ನ ಮರ್ಮಾಂಗವನ್ನು ಕೊಯ್ದಕೊಂಡು ವಿಪರೀತ ರಕ್ತ ಸ್ರಾವವಾಗಿ ಮರಣ ಹೊಂದಿರುತ್ತಾರೆ. ಈ ಬಗ್ಗೆ ಮೃತರ ಸಹೋದರ ಸತೀಶ್ ಕಚ್ಚೂರು ಬ್ರಹ್ಮಾವರ ನೀಡಿರುವ ದೂರಿನ ಅನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.