ನವದೆಹಲಿ, ಮಾರ್ಚ್ 17: ಮುಂಬರುವ ಹಣಕಾಸು ವರ್ಷದಿಂದ 2025ರ ಬಜೆಟ್ನ್ಲಲಿ ಮಾಡಲಾದ ಕೆಲ ಪ್ರಮುಖ ಘೋಷಣೆಗಳು ಜಾರಿಗೆ ಬರಲಿವೆ. ಏಪ್ರಿಲ್ 1ರಿಂದ ಜಾರಿಯಾಗಲಿರುವ ಕೆಲ ಪ್ರಮುಖ ನಿಯಮಗಳಲ್ಲಿ ಟಿಡಿಎಸ್ದ್ದೂ ಇದೆ. ಬಡ್ಡಿಯಿಂದ ಬರುವ ಆದಾಯ, ಡಿವಿಡೆಂಡ್ಗಳಿಂದ ಬರುವ ಆದಾಯ, ಬಾಡಿಗೆಗಳಿಂದ ಬರುವ ಆದಾಯ, ಇನ್ಷೂರೆನ್ಸ್ ಕಮಿಷನ್ಗಳಿಂದ ಬರುವ ಆದಾಯ ಇವುಗಳಿಗೆ ಟಿಡಿಎಸ್ ವಿನಾಯಿತಿ ಪಡೆಯಲು ಇದ್ದ ಮಿತಿಯನ್ನು ಏರಿಸಲಾಗಿದೆ. 2025ರ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಏನೇನು ಬದಲಾವಣೆಗಳಾಗುತ್ತವೆ ಎನ್ನುವುದರ ವಿವರ ಈ ಕೆಳಕಂಡಂತಿದೆಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಮತ್ತಿತರ ಸೇವಿಂಗ್ಸ್ ಸ್ಕೀಮ್ಗಳಿಂದ ಸಿಗುವ ಬಡ್ಡಿ ಒಂದು ವರ್ಷದಲ್ಲಿ 50,000 ರೂಗಿಂತ ಒಳಗಿದ್ದರೆ ಅದಕ್ಕೆ ಟಿಡಿಎಸ್ ಮುರಿದುಕೊಳ್ಳಲಾಗುವುದಿಲ್ಲ. ಅಂದರೆ ಟಿಡಿಎಸ್ನಿಂದ ವಿನಾಯತಿ ಮಿತಿ 50,000 ರೂ ಇದೆ. ಇದು ಹಿರಿಯ ನಾಗರಿಕರಿಗೆ ಇರುವ ಸೌಲಭ್ಯ. ಏಪ್ರಿಲ್ 1ರಿಂದ ಈ ಮಿತಿಯನ್ನು 1,00,000 ರೂಗೆ ಏರಿಸಲಾಗುತ್ತಿದೆ.
ಅಂದರೆ, ಹಿರಿಯ ನಾಗರಿಕರು ಒಂದು ಹಣಕಾಸು ವರ್ಷದಲ್ಲಿ ಎಫ್ಡಿ ಇತ್ಯಾದಿಯಿಂದ ಪಡೆಯುವ ಬಡ್ಡಿ ಆದಾಯ ಒಂದು ಲಕ್ಷ ರೂ ಒಳಗಿದ್ದರೆ ಯಾವ ಟಿಡಿಎಸ್ ಇರುವುದಿಲ್ಲ. ಒಂದು ಲಕ್ಷ ರೂಗಿಂತ ಹೆಚ್ಚಿದ್ದರೆ ಹೆಚ್ಚುವರಿ ಮೊತ್ತಕ್ಕೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಉದಾಹರಣೆಗೆ, ನಿಮ್ಮ ವಾರ್ಷಿಕ ಬಡ್ಡಿ ಆದಾಯ 1,50,000 ರೂ ಇದ್ದರೆ ಒಂದೂವರೆ ಲಕ್ಷ ರೂ ಬದಲು 50,000 ರೂಗೆ 500 ರೂ ಟಿಡಿಎಸ್ ಅನ್ವಯ ಆಗುತ್ತದೆ.
ಮನೆ ಬಾಡಿಗೆ, ಕಮರ್ಷಿಯಲ್ ಬ್ಯುಲ್ಡಿಂಗ್ ಬಾಡಿಗೆಗಳಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ವರ್ಷಕ್ಕೆ 2,40,000 ರೂವರೆಗಿನ ಅಂಥ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಸಿಗುತ್ತಿದೆ. ಈ ಮಿತಿಯನ್ನು 6,00,000 ರೂಗೆ ಏರಿಸಲಾಗಿದೆ. ಅಂದರೆ, ನಿಮಗೆ ತಿಂಗಳಿಗೆ 50,000 ರೂವರೆಗೆ ಬಾಡಿಗೆ ಆದಾಯ ಬರುತ್ತಿದ್ದರೆ ಟಿಡಿಎಸ್ ಕಡಿತದ ಭಯ ಬೇಡ. ಅದನ್ನು ಮೀರಿದ ಆದಾಯಕ್ಕೆ ಮಾತ್ರವೇ ಟಿಡಿಎಸ್ ಅನ್ವಯ ಆಗುತ್ತದೆ.
ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಮತ್ತಿತರ ಸೇವಿಂಗ್ಸ್ ಸ್ಕೀಮ್ಗಳಿಂದ ಸಿಗುವ ಬಡ್ಡಿ ಒಂದು ವರ್ಷದಲ್ಲಿ 50,000 ರೂಗಿಂತ ಒಳಗಿದ್ದರೆ ಅದಕ್ಕೆ ಟಿಡಿಎಸ್ ಮುರಿದುಕೊಳ್ಳಲಾಗುವುದಿಲ್ಲ. ಅಂದರೆ ಟಿಡಿಎಸ್ನಿಂದ ವಿನಾಯತಿ ಮಿತಿ 50,000 ರೂ ಇದೆ. ಇದು ಹಿರಿಯ ನಾಗರಿಕರಿಗೆ ಇರುವ ಸೌಲಭ್ಯ. ಏಪ್ರಿಲ್ 1ರಿಂದ ಈ ಮಿತಿಯನ್ನು 1,00,000 ರೂಗೆ ಏರಿಸಲಾಗುತ್ತಿದೆ.
ಅಂದರೆ, ಹಿರಿಯ ನಾಗರಿಕರು ಒಂದು ಹಣಕಾಸು ವರ್ಷದಲ್ಲಿ ಎಫ್ಡಿ ಇತ್ಯಾದಿಯಿಂದ ಪಡೆಯುವ ಬಡ್ಡಿ ಆದಾಯ ಒಂದು ಲಕ್ಷ ರೂ ಒಳಗಿದ್ದರೆ ಯಾವ ಟಿಡಿಎಸ್ ಇರುವುದಿಲ್ಲ. ಒಂದು ಲಕ್ಷ ರೂಗಿಂತ ಹೆಚ್ಚಿದ್ದರೆ ಹೆಚ್ಚುವರಿ ಮೊತ್ತಕ್ಕೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಉದಾಹರಣೆಗೆ, ನಿಮ್ಮ ವಾರ್ಷಿಕ ಬಡ್ಡಿ ಆದಾಯ 1,50,000 ರೂ ಇದ್ದರೆ ಒಂದೂವರೆ ಲಕ್ಷ ರೂ ಬದಲು 50,000 ರೂಗೆ 500 ರೂ ಟಿಡಿಎಸ್ ಅನ್ವಯ ಆಗುತ್ತದೆ
ಸೆಕ್ಯೂರಿಟೈಸೇಶನ್ ಟ್ರಸ್ಟ್ಗಳಲ್ಲಿ ಮಾಡಿದ ಹೂಡಿಕೆಯಿಂದ ಸಿಗುವ ಆದಾಯಕ್ಕೆ ಶೇ. 10ರಷ್ಟು ಮಾತ್ರವೇ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಸದ್ಯ ಈ ಆದಾಯಕ್ಕೆ ಶೇ. 25-30ರಷ್ಟು ಟಿಡಿಎಸ್ ಇದೆ. ವ್ಯಕ್ತಿಗಳಿಗೆ ಶೇ. 25, ಕಂಪನಿಗಳಿಗೆ ಶೇ. 30ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಈಗ ಎಲ್ಲರಿಗೂ ಸಮಾನವಾಗಿ ಶೇ. 10ರಷ್ಟು ಮಾತ್ರವೇ ಟಿಡಿಎಸ್ ಕಡಿತ ಆಗುತ್ತದೆ. ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರುತ್ತದೆ.
ಸೆಕ್ಯೂರಿಟೈಸೇಶನ್ ಟ್ರಸ್ಟ್ ಎನ್ನುವುದು ಒಂದು ಹಣಕಾಸು ಸಂಸ್ಥೆಯಾಗಿದ್ದು, ಅದು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ವಿವಿಧ ರೀತಿಯ ಸಾಲಗಳನ್ನು ಖರೀದಿಸಿ, ಅದನ್ನು ಸೆಕ್ಯೂರಿಟೀಸ್ (ಬಾಂಡ್) ಅಗಿ ಪರಿವರ್ತಿಸಿ ಹೂಡಿಕೆದಾರರಿಗೆ ಮಾರುತ್ತದೆ. ಆ ಸಾಲ ವಸೂಲಾತಿಯಿಂದ ಸಿಗುವ ಆದಾಯವನ್ನು ಈ ಸೆಕ್ಯೂರಿಟೀಸ್ ಹೂಡಿಕೆದಾರರಿಗೆ ಹಂಚಿಕೆ ಮಾಡಲಾಗುತ್ತದೆ.