ಬೆಂಗಳೂರು :ಮಾರ್ಚ್ 15:ತುಳು-ಕನ್ನಡ ವಿದ್ವಾಂಸರಾಗಿದ್ದ ಡಾ.ವಾಮನ ನಂದಾವರ ನಿಧನರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ತುಳು-ಕನ್ನಡ ವಿದ್ವಾಂಸರಾಗಿದ್ದ ಡಾ.ವಾಮನ ನಂದಾವರ ನಿಧನದಿಂದ ದು:ಖವಾಗಿದೆ ತುಳು ಅಕಾಡೆಮಿಯ ಅಧ್ಯಕ್ಷತೆಯೂ ಸೇರಿದಂತೆ ಹಲವಾರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದ ಡಾ.ನಂದಾವರ ಅವರು ತುಳು ಮತ್ತು ಕನ್ನಡ ಜಾನಪದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ
ಡಾ.ವಾಮನ ನಂದಾವರ ಅವರ ಕುಟುಂಬ ಮತ್ತು ಬಂಧುಮಿತ್ರರ ಶೋಕದಲ್ಲಿ ನಾನೂ ಭಾಗಿ. ಮೃತರ ಆತ್ಮಕ್ಕೆ ಶಾಂತಿ ಕೋರುವೆ ಎಂದು ಟ್ವೀಟ್ ಮಾಡಿದ್ದಾರೆ