ಕಾರ್ಕಳ: ಮಾರ್ಚ್ 14: ಕಾರ್ಕಳ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟೊ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ವಿರಾಜಪೇಟೆಯವರಾಗಿರುವ ಲೀನಾ ಬ್ರಿಟೊ ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಈ ಹಿಂದೆ ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೂಪಾ ಟಿ. ಶೆಟ್ಟಿ ಅವರು ಮೂಡುಬಿದಿರೆ ಸಮುದಾಯ ಸಂಘಟನಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ. ರೂಪಾ ಶೆಟ್ಟಿ ಅವರು 2021ರ ಮೇ ತಿಂಗಳಿನಲ್ಲಿ ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.