ಕಾರ್ಕಳ : ಮಾರ್ಚ್ 09:ಬ್ರಹ್ಮ ಶ್ರೀ ಸತ್ಯಸಾರಮಣಿ ದೈವಸ್ಥಾನ ಎರ್ಮಂಜಪಲ್ಲ ನಿಟ್ಟೆ,ಕಾರ್ಕಳ ತಾಲುಕು, 29 ನೇ ವರ್ಷದ ನಿಟ್ಟೆ ಬ್ರಹ್ಮ ಶ್ರೀ ಸತ್ಯ ಸಾರಮಣಿ ದೈವಗಳ ನೇಮೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ದಿನಾಂಕ 8-03-2025 ರಿಂದ 9-03-2025 ರವರೆಗೆ ನಡೆಯಿತು.
ದಿನಾಂಕ 8-03-2025ರಂದು ಶನಿವಾರ ಬೆಳಿಗ್ಗೆ ದೈವಗಳಿಗೆ ಶುದ್ಧೀಕರಣ ಮತ್ತು ನಾಗದೇವರಿಗೆ ತಾನು ತಂಬಿಲ ಸೇವೆ,ನಂತರ ಮಹಾಪೂಜೆ, ಅನ್ನಸಂತರ್ಪಣೆ ದಾನಿಗಳ ಪ್ರಸಾದ ವಿತರಣೆ ಸತ್ಯಾಸಾರಮಣಿ ದೈವಗಳ ನೇಮೋತ್ಸವ ಹಲೇರ ಪಂಜುರ್ಲಿ ಗಗ್ಗರ ಸೇವೆ, 09-03-2025ರಂದು ಬೆಳಿಗ್ಗೆ ಕಲ ತ ಗುಳಿ ಗ ದೈವಗಳ ನೇಮೋತ್ಸವ, ಚಾಮುಂಡಿ ಮತ್ತು ಗುಳಿಗ ದೈವಗಳ ಗಗ್ಗರ ಸೇವೆ, ದೈವಗಳ ತಂಬಿಲ ಸೇವೆ ಇತ್ಯಾದಿ ವಿಜೃಂಭಣೆಯಿಂದ ನಡೆಯಿತು.
ಸತ್ಯ ಸಾರಮಣಿ ದೈವಸ್ಥಾನ ಅಧ್ಯಕ್ಷರು ಧರ್ಮಣ್ಣ ನಿಟ್ಟೆ, ಹಾಗೂ ಗೌರವಾಧ್ಯಕ್ಷರು ಪೆರ್ಗು ಪೂಜಾರಿ ಹಾಗೂ ಸಮಿತಿಯು ಸರ್ವ ಸದಸ್ಯರು ದೈವಗಳ ನೇಮೋತ್ಸವ ಸೇರಿದ್ದರು, ಗೌರವಾಧ್ಯಕ್ಷ ರು ಮತ್ತು ಅಧ್ಯಕ್ಷರು ಮಾಧ್ಯಮಕ್ಕೆ ಕಾರ್ಯಕ್ರಮದ ವಿವರ ನೀಡಿದರು. ಭಕ್ತಾದಿಗಳು ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.