ಉಡುಪಿ : ಮಾರ್ಚ್ 02:ಬೀಡಿ ಕಾರ್ಮಿಕರ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಾರ್ಚ್6 ರಂದು ವಿದಾನಸೌಧ ಚಲೋ ಕಾರ್ಯಕ್ರಮ ನಡೆಯಲಿದೆ
ಬೀಡಿ ಕಂಪನಿಯ ಮಾಲೀಕರು ಹಲವು ವರ್ಷಗಳಿಂದ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಬದ್ಧ ವಾಗಿ ಸಿಗಬೇಕಾದ ಕನಿಷ್ಠ ಕೂಲಿ,ತುಟ್ಟಿಭತ್ಯೆ ಯನ್ನು ನೀಡದೆ ವಂಚಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಳಪೆ ಬೀಡಿ ಎಲೆಗಳನ್ನು ನೀಡಿ ಕಾರ್ಮಿಕರನ್ನು ಸತಾಯಿಸುದರೋಂದಿಗೆ ವೇತನ ಕಡಿತ ಗೊಳಿಸುತ್ತಿದ್ದಾರೆ ಅದ್ದರಿಂದ ಕಾರ್ಮಿಕ ಇಲಾಖೆ,ಸರಕಾರದ ಗಮನಕ್ಕೂ ತರಲಾಗಿದೆ.
ಮಾರ್ಚ್ 3ರಂದು ಬಜೆಟ್ ಪೂರ್ವ ಅಧಿವೇಶನ ನಡೆಯುತ್ತಿದ್ದು ಬೀಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಈಗಾಗಲೇ ಉಡುಪಿ ಜಿಲ್ಲೆಯ ಮತ್ತು ದ.ಕ ಜಿಲ್ಲೆಯ ಶಾಸಕರಿಗೆ,ವಿಧಾನಪರಿಷತ್ ಸದಸ್ಯರಿಗೆ ಬೀಡಿ ಸಂಘದಿಂದ ಮನವಿ ನೀಡಲಾಗಿದೆ.ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ 3ಲಕ್ಷಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ
ಪ್ರಮುಖ ಬೇಡಿಕೆಗಳು
1. 1000ಬೀಡಿಗೆ ಕನಿಷ್ಟ ರಾಷ್ಟ್ರೀಯ ಸಮಾನ ಕೂಲಿ 395ರೂಪಾಯಿ ನೀಡಬೇಕು
2. ನಿರುದ್ಯೋಗಿಗಳಾಗುತ್ತಿರುವ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಅಥವಾ ಪರಿಹಾರ ನೀಡಬೇಕು.
3. ಕಾನೂನು ಬಾಹಿರ ಬೀಡಿ ಉತ್ಪಾದನೆ ನಿಲ್ಲಿಸಬೇಕು.
4. ರಾಜ್ಯದಲ್ಲಿ ಬೀಡಿ ಕಾರ್ಮಿಕರ ಕನಿಷ್ಟ ಕೂಲಿ ಬಾಕಿ ಸಮೇತ ಜಾರಿಗೆ ಒತ್ತಾಯಿಸಿ
5. ಬೀಡಿ ಕಾರ್ಮಿಕರಿಗೆ ಪಿಂಚಣಿ ಮಾಸಿಕ 6000ರೂ ನೀಡಬೇಕು.
6. ಹಲವು ವರ್ಷಗಳಿಂದ ಬಾಕಿ ಇರುವ ತುಟ್ಟಿಭತ್ಯೆ ನೀಡಬೇಕು ಒತ್ತಾಯಿಸಿ ಮಾರ್ಚ್6 ರಂದು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಬೀಡಿ ಕಾರ್ಮಿಕರಿಂದ ನಡೆಸಿ ಸರಕಾರವನ್ನು ಒತ್ತಾಯಿಸಲಿದೆ. ಅದ್ದರಿಂದ ಉಡುಪಿ ಜಿಲ್ಲೆ ಮತ್ತು ದ.ಕ.ಜಿಲ್ಲೆಯ ಬೀಡಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಖಿಲಭಾರತ ಬೀಡಿ ಫೆಡರೇಷನ್ ಕೇಂದ್ರ ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ