ಉಡುಪಿ: ಬೈಲಕೆರೆ ವಿದ್ಯೋದಯ ಶಾಲೆಯಿಂದ ಕೊಡವೂರು ಸಾಯಿಬಾಬ ನಗರದವರೆಗೂ ಇಂದ್ರಾಣಿ ನದಿಯ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯು ಪರಿಸರಕ್ಕೆ ಮಾರಕವಾಗುವಂತ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನಿಸುವಂತೆ, ಹಾಗೂ ಕೊಳಚೆ ಮಣ್ಣು ಸುರಕ್ಷಿತ ಸ್ಥಳಕ್ಕೆ ವಿಲೇವಾರಿಗೊಳಿಸಲು ಸೂಕ್ತ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರ ಅವರು ಆಗ್ರಹಿಸಿದ್ದಾರೆ.
ನದಿಯಲ್ಲಿ ಹೂಳೆತ್ತಿದ ಕೊಳಚೆ ಮಣ್ಣನ್ನು ನದಿ ದಡಗಳಲ್ಲಿ ಹಾಗೂ ನದಿ ಅಂಚಿನಲ್ಲಿರುವ ಸಾರ್ವಜನಿಕರ ಸ್ಥಳಗಳಲ್ಲಿ ದಾಸ್ತಾನು ಮಾಡುತ್ತಿರುವುದು ಕಂಡುಬಂದಿದೆ. ಕೊಳಚೆ ಮಣ್ಣು ಗಬ್ಬು ವಾಸನೆ ಹೊಡೆಯುತ್ತಿದ್ದು, ಇದರಲ್ಲಿ ತಾಜ್ಯಗಳಿದ್ದು, ರೋಗಕಾರಕ ಸೊಳ್ಳೆಗಳು ಉತ್ಪತ್ತಿಗೆ ಕಾರಣವಾಗಿದೆ. ಮಳೆ ಬಂದಲ್ಲಿ ಕೊಳಚೆ ತ್ಯಾಜ್ಯ ಮಣ್ಣಿನ ನೀರು ಬಾವಿಗಳಿಗೆ ಸೇರುವ ಸಾಧ್ಯತೆ ಇದೆ. ಅಲ್ಲದೆ ಮಳೆಗೆ ಹೂಳೆತ್ತಿದ್ದ ಮಣ್ಣು ಪುನ ನದಿ ಸೇರುತ್ತದೆಂದು ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ.