ಉಡುಪಿ :ಫೆಬ್ರವರಿ 26:ಅಮೆರಿಕಾದ ನಾರ್ತ್ ಕರೋಲಿನಾ ರಾಜ್ಯದ ಶ್ರೀಕೃಷ್ಣ ವೃಂದಾವನ ತಂಡದ ವತಿಯಿಂದ ಏರ್ಪಡಿಸಿದ್ದ “ಪುರಂದರ ಉತ್ಸವ -೨೦೨೫” ಮೊನ್ನೆ ಶನಿವಾರ ಫೆಬ್ರವರಿ ೨೨ ರಂದು ಬಹು ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ೭ ರಿಂದಲೇ ಘೋಷ್ಠಿ , ಗಾಯನ , ಮೆರವಣಿಗೆಯಿಂದ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಹತ್ತು-ಹಲವಾರು ತಂಡಗಳ ಸುಮಾರು 400 ಕ್ಕೂ ಹೆಚ್ಚು ಕಲಾವಿದರು (ಚಿಣ್ಣರು-ದೊಡ್ಡವರು) ಭಾಗವಹಿಸಿ ಹಾಡುಗಾರಿಕೆ – ನೃತ್ಯ – ಪುರಂದರ ದಾಸರ ಕೃತಿ ಕಚೇರಿ – ದಾಸರ ಕೀರ್ತನೆಗಳು – ಸಂಜೆ ಹಲವು ನೃತ್ಯ-ನಾಟಕಗಳು, ಯಕ್ಷಗಾನ ಹೀಗೆ ಹಲವಾರು ಸುಂದರವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಬೆಳೆಗ್ಗೆಯಿಂದ ೭ ರಿಂದ ರಾತ್ರಿ ೧೦:೩೦ರ ತನಕ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಶ್ರೀ ಕೃಷ್ಣ ವೃಂದಾವನದ ನೂರಾರು ಸ್ವಯಂ ಸೇವಕರು ದಿನವಿಡೀ ಭಕ್ತಿ ಪೂರ್ವಕದಿಂದ ಬಂದಿದ್ದ ಎಲ್ಲರಿಗೂ ಬೆಳಗಿನ ಉಪಹಾರ – ಮಧ್ಯಾನಃ – ಸಂಜೆಯ ಭೋಜನ ವ್ಯವಸ್ಥೆ ಮಾಡಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಟ್ಟರು.