ಮಣಿಪಾಲ, 19 ಫೆಬ್ರವರಿ 2025: ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ 35 ವರ್ಷದ ಶ್ರೀ ರಾಘವೇಂದ್ರ ಅವರಿಗೆ 17ನೇ ಫೆಬ್ರವರಿ 2025ರಂದು ಮಧ್ಯರಾತ್ರಿ 12.20 AM ಗೆ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರ ಗಾಯಗಳ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯಿತು, ಸಂಪೂರ್ಣ ವೈದ್ಯಕೀಯ ಚಿಕೆತ್ಸೆಯ ಹೊರತಾಗಿಯೂ ಶ್ರೀ ರಾಘವೇಂದ್ರ ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ . ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಪ್ರಕಾರ ಪರಿಣಿತ ವೈದ್ಯರ ಸಮಿತಿಯು ಎರಡು ಬಾರಿ ಅಧಿಕೃತವಾಗಿ ಬ್ರೈನ್ ಡೆಡ್ ಎಂದು ಘೋಷಿಸಿತು, ಅವರ ಕುಟುಂಬವು ಅವರ ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡುವ ಧೈರ್ಯದ ನಿರ್ಧಾರವನ್ನು ತೆಗೆದುಕೊಂಡಿತು, ಆ ಮೂಲಕ ಅಗತ್ಯವಿರುವ ಇತರರಿಗೆ ಅಂಗ ದಾನ ಮಾಡಲು ನಿರ್ಧರಿಸಿತು.
ಜೀವಸಾರ್ಥಕಥೆ, ಸೊಟ್ಟೊ ಬೆಂಗಳೂರು ಇವರ ನಿಯಮಾವಳಿಗಳನ್ನು ಅನುಸರಿಸಿ, ಶ್ರೀ ರಾಘವೇಂದ್ರ ಅವರ ಒಂದು ಕಿಡ್ನಿ ಮತ್ತು ಯಕೃತ್ತನ್ನು ಎ ಜೆ ಆಸ್ಪತ್ರೆ, ಮಂಗಳೂರು, ಶ್ವಾಸಕೋಶವನ್ನು ಕಿಮ್ಸ್ ಆಸ್ಪತ್ರೆ , ಸಿಕಂದರಾಬಾದ್, ತೆಲಂಗಾಣ ಗೆ ಕಳುಹಿಸಲಾಯಿತು. ಒಂದು ಕಿಡ್ನಿ ಎರಡು ಕಾರ್ನಿಯಾಗಳನ್ನು ಮತ್ತು ಚರ್ಮವನ್ನು ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲು ಉಳಿಸಿಕೊಳ್ಳಲಾಯಿತು .
ಅಂಗಾಂಗ ದಾನದ ಕಾರ್ಯವು ಜೀವ ಉಳಿಸುವ ಉದಾತ್ತ ಪ್ರಯತ್ನವಾಗಿದೆ ಇತರರು ಇಂತಹ ಪರಹಿತಚಿಂತನೆಯನ್ನು ಮೈಗೂಡಿಸಿಕೊಳ್ಳುವಂತೆ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಈ ಸಹಾನುಭೂತಿಯ ನಿರ್ಧಾರಕ್ಕಾಗಿ ಅವರು ಶ್ರೀ ರಾಘವೇಂದ್ರ ಅವರ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು.