ಉಡುಪಿ : ಫೆಬ್ರವರಿ 20:ನಿರ್ಮಾಣ ಹಂತದಲ್ಲಿರುವ ಮನೆಯ ಛಾವಣಿಯ ತಗಡು ಶೀಟು ಅಳವಡಿಸಲು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 30 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಫೆ. 17ರಂದು ಅಂಬಲಪಾಡಿ ಕುಂಜಿಗುಡ್ಡೆ ಬಳಿಯ ಸಂಭವಿಸಿದೆ.
ಮೃತ ಪಟ್ಟವರು ಸುರೇಶ್ ಆಚಾರ್ಯ (38) ಎಂದು ತಿಳಿದು ಬಂದಿದ್ದು ಇವರು ಸುಮಾರು 18 ವರ್ಷಗಳಿಂದ ಅಜ್ಜರಕಾಡು, ಬ್ರಹ್ಮಗಿರಿ, ಅಂಬಲಪಾಡಿ ಪರಿಸರದಲ್ಲಿ ಪತ್ರಿಕಾ ವಿತಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ
ಇವರು ಫೆಬ್ರವರಿ 17ರಂದು ಸೋಮವಾರ ಮಧ್ಯಾಹ್ನ ಛಾವಣಿಯ ಮೇಲೆ ಕೆಲಸ ನಿರತರಾಗಿದ್ದಾಗ ಆಯ ತಪ್ಪಿ 30 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ತಲೆ ಹಿಂಬದಿ ಗಾಯಗೊಂಡಿದೆ.
ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ
ಗುತ್ತಿಗೆದಾರರು ಮತ್ತು ಕಟ್ಟಡದ ಎಂಜಿನಿಯರ್ ಕಾಮಗಾರಿ ನಡೆಸುವ ಸಮಯ ಯಾವುದೇ ಸುರಕ್ಷಾ ಕ್ರಮ ಮತ್ತು ಮುಂಜಾಗ್ರತೆ ವಹಿಸದೇ ಇರುವ ಕಾರಣ ಈ ಘಟನೆ ನಡೆದಿದೆ ಎಂದು ಮೃತರ ಪತ್ನಿ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನ ತಿಳಿಸಲಾಗಿದೆ