ಕಾರ್ಕಳ : ಫೆಬ್ರವರಿ 20:ಬೈಲೂರು ಮಾಡ ಬಳಿ ಕಾರು ಹಾಗೂ ಬೈಕ್ ನಡುವೆ ಬುಧವಾರ ಢಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಮಣಿಪಾಲ ಮೂಲದ ಯುವಕ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಕಳದಿಂದ ಮಣಿಪಾಲಕ್ಕೆ ಸಾಗುತ್ತಿದ್ದ ಬೈಕ್ ಮತ್ತು ಉಡುಪಿ ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.