ಉಡುಪಿ :ಫೆಬ್ರವರಿ 18:ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಭಾದಿತ ಜನತೆಯ ನೆರವಿಗಾಗಿ ಆಗ್ರಹಿಸಿ ಇಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವ ಸೇನೆ ಜಂಟಿಯಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಜಯನ್ ಮಲ್ಪೆ,ಸಿಪಿಐಎಂ ಪಕ್ಷದ ರಾಜ್ಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ,ಜಿಲ್ಲಾ ಮುಖಂಡರಾದ ಕೆ.ಶಂಕರ್ ,ಎಚ್ ನರಸಿಂಹ, ಶಶಿಧರ ಗೊಲ್ಲ,ಚಂದ್ರಶೇಖರ, ಕವಿರಾಜ್. ಎಸ್,ಉಮೇಶ್ ಕುಂದರ್,ಸರೋಜ,ದಲಿತ ಸಂಘರ್ಷ ಸಮಿತಿ ಯ ಮುಖಂಡರಾದ ಗಣೇಶ್ ನೆರ್ಗಿ,ಕ್ರಷ್ಣ ಶ್ರೀ ಯಾನ್, ಸಂಧ್ಯಾ,ಋಣಮುಕ್ತ ಹೋರಾಟ ಸಮಿತಿಯ ಸಂಚಾಲಕರಾದ ಮಮತಾ ನಾಯಕ್, ದಲಿತ ಹಕ್ಕುಗಳ ಸಮಿತಿ ಸಂಚಾಲಕರಾದ ಸಂಜೀವ ಬಳ್ಕೂರು,ಸಿಐಟಿಯು ಮುಖಂಡರಾದ ನಳಿನಿ,ದಯಾನಂದ,ಮುರಳಿ,ವೆಂಕಟೇಶ ಕೋಣಿ,ಸೈಯಾದ್ ಅಲಿ,ರಮೇಶ್,ರಾಮ ಕಾರ್ಕಡ, ಉಪಸ್ಥಿತರಿದ್ದರು