ಉಡುಪಿ:ಫೆಬ್ರವರಿ 18:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪರಿವಾರ ದೈವ ವಾದ ಶ್ರೀ ಕಲ್ಕುಡ ಹಾಗೂ ಕಲ್ಲುರ್ಟಿ ದೈವಗಳ ಪುನರ್ ಪ್ರತಿಷ್ಠಾಪನೆಯೂ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ..
ಕ್ಷೇತ್ರದಲ್ಲಿ ನಿರ್ಮಿಸಲಾದ ನೂತನ ಗುಡಿಯಲ್ಲಿ ಪ್ರತಿಷ್ಠಾ ಪೂರ್ವ ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತು ರಾಕ್ಷೋಜ್ಞಾದಿ ಪ್ರಕ್ರಿಯೆಗಳು ಡಿಕ್ಬಾಲ ಬಲಿ,ಬಿಂಬ ಸಂಕೋಚಾದಿ ಪ್ರಕ್ರಿಯೆಗಳು ಆದಿವಾಸ ಪ್ರಕ್ರಿಯೆಗಳು ನೆರವೇರಿದವು.
ಬೆಳಗ್ಗೆ ಆದ್ಯ ಗಣಪತಿಯಾಗ ಪ್ರತಿಷ್ಠ ಪ್ರಧಾನ ಹೋಮ. ಪ್ರತಿಷ್ಠೆ, ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ, ಪ್ರಸನ್ನ ಪೂಜೆ ನೆರವೇರಲಿದೆ..
ಪ್ರತಿಷ್ಠೆಯ ಬಳಿಕ ದೈವ ದರ್ಶನ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ