ಉಡುಪಿ: ಫೆಬ್ರವರಿ 10:ತೆಂಕನಿಡಿಯೂರಿನ ಕಿರಣ್ ಮಿಲ್ಕ್ ಸಂಸ್ಥೆಯ ಮಾಲಕ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಟಿ. ಗೋಪಾಲಕೃಷ್ಣ ಶೆಟ್ಟಿ (77) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸೋಮವಾರ (ಫೆ.10) ನಿಧನರಾಗಿದ್ದಾರೆ.
ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಟಿ.ಗೋಪಾಲಕೃಷ್ಣ ಶೆಟ್ಟಿ ಅವರು ಸ್ಥಳೀಯವಾಗಿ ಸಾಮಾಜಿಕ, ಧಾರ್ಮಿಕ, ಕ್ರೀಡಾ ಕ್ಷೇತ್ರಗಳಲ್ಲಿ ಪ್ರೋತ್ಸಾಹಕರಾಗಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗೌರವ ಸಲಹೆಗಾರರಾಗಿದ್ದ ಟಿ. ಗೋಪಾಲಕೃಷ್ಣ ಶೆಟ್ಟಿ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಬಂಧುಬಳಗವನ್ನು ಅಗಲಿದ್ದಾರೆ.