ಉಡುಪಿ :ಫೆಬ್ರವರಿ 10:ಶ್ರೀ ಪುತ್ತಿಗೆ ಮಠದ ಮೂಲ ಪುರುಷ ರಾದ ಶ್ರೀ ಶ್ರೀ ಉಪೇಂದ್ರ ತೀರ್ಥರ ಆರಾಧನಾ ಮಹೋತ್ಸವ (೯-೨-೨೦೨೫). ಹಾಗೂ ಶ್ರೀ ವಾದಿರಾಜ ಜಯಂತಿ ಮಹೋತ್ಸವ ವೈಭವದಿಂದ ಸಂಪನ್ನಗೊಂಡಿತು.
ಸಂಜೆ ವೈಭವದ ಮೆರವಣಿಗೆ ಬಳಿಕ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ವಿದ್ವಾನ್ ಹೃಷಿಕೇಶ ಮಠದ ಇವರು ಮಾತನಾಡಿ ಗುರು ಮಹಿಮೆಯನ್ನು ಕೊಂಡಾಡಿದರು.
ಪೂಜ್ಯ ಪರ್ಯಾಯ ಶ್ರೀಪಾದರು ತಮ್ಮ ಅನುಗ್ರಹ ಭಾಷಣದಲ್ಲಿ ಪೂಜ್ಯ ಯತಿ ದ್ವಯರ ಸಾಧನೆ ನಮ್ಮೆಲ್ಲರ ಜೀವನಕ್ಕೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.