ಕಾರ್ಕಳ :ಫೆಬ್ರವರಿ 10:ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಇಬ್ಬರನ್ನು ಕಾರ್ಕಳ ವನ್ಯಜೀವಿ ವಲಯದ ಅಧಿಕಾರಿಗಳು ಬಂಧಿಸಿದ ಘಟನೆ ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವನ್ಯಜೀವಿ ವಲಯದ ನೂರಾಲ್‌ಬೆಟ್ಟು ಗ್ರಾಮದಲ್ಲಿ ನಡೆದಿದೆ
ಬಂದಿತರಿಂದ 1 ಬಂದೂಕು, 21 ಕಾಡತೂಸು, 1 ಸರ್ಚ್‌ಲೈಟ್, 2 ಮೊಬೈಲ್ ಫೋನ್, ಕಾರು ಮತ್ತು ಆಟೋರಿಕ್ಷಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಶಾಂತ್ ಪೂಜಾರಿ ಮತ್ತು ಅಶೋಕ್ ಪೂಜಾರಿಯನ್ನು ಬಂಧಿತರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳದ ಉಪಅರಣ್ಯ ಸಂರಕ್ಷಣಾ ಕಾರಿ ಶಿವರಾಮು ಬಾಬು ಅವರ ನಿರ್ದೇಶನದಂತೆ, ಕುದುರೆಮುಖ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಸತೀಶ್ ಎನ್. ಮಾರ್ಗದರ್ಶನದಲ್ಲಿ ಕಾರ್ಕಳ ವನ್ಯಜೀವಿ ವಲಯದ ವಲಯ ಅರಣ್ಯಾ ಧಿಕಾರಿ ಶಶಿಧರ ಗೌಡ ಪಾಟೀಲ್ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಉಪವಲಯ ಅರಣ್ಯಾ ಧಿಕಾರಿ ರಾಜು ಎಲ್.ಜೆ., ಅಭಿಲಾಷ್ ಎಸ್.ಬಿ., ಗಸ್ತು ಅರಣ್ಯ ಪಾಲಕ ಪಕೀರಪ್ಪ ಗುರನಗೌಡ್ರು, ಮಲ್ಲಯ್ಯ, ಬೇಟೆ ನಿಯಂತ್ರಣ ಕಾವಲುಗಾರರಾದ ಹರೀಶ್ ಎಂ., ನಿತಿನ್, ಅಜಿತ್ ಹಾಗೂ ವಾಹನ ಚಾಲಕರಾದ ದಾಮೋದರ, ನಿತಿನ್ ಜೆ. ಹೆಡ್ಡೆ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.