ಬ್ರಹ್ಮಾವರ:ಫೆಬ್ರವರಿ 06: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಬುಧವಾರ ಕೊಕ್ಕರ್ಣೆ ಸಮೀಪದ ಕಾಡೂರಿನ ಗೋಳಿಕಟ್ಟೆ ಬಳಿಯ ತಿರುವಿನಲ್ಲಿ ಸಂಭವಿಸಿದೆ
ಕಾರಿನಲ್ಲಿದ್ದ ಮಹಿಳೆ ಬೀಜಾಡಿಯ ಜಯಲಕ್ಷ್ಮೀ (65) ಎಂದು ತಿಳಿದು ಬಂದಿದೆ .
ರಾಮಚಂದ್ರ ಭಟ್, ಸುಜಾತಾ, ಮಂಗಳಾ ಹಾಗೂ ಪ್ರೇಮಾ ಗಾಯಗೊಂಡಿದ್ದಾರೆ. ಅವರು ಹೆಬ್ರಿ ಕಬ್ಬಿನಾಲೆ ಜಾತ್ರೆ ಮುಗಿಸಿ ಮಂದಾರ್ತಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.