ಉಡುಪಿ: ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ 80 ಬಡಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಕೇಶವ ಕೋಟ್ಯಾನ್ ಅವರನ್ನು ಆಹ್ವಾನಿಸಲಾಗಿದೆ
ಜಲಜೀವನ್ ಮಿಷನ್ ಯೋಜನೆಯಡಿ ವಿಡಬುಎಸ್‌ಸಿ ಸಮಿತಿಯ ಓರ್ವ ಸದಸ್ಯರನ್ನು ನಿಯೋ ಜಿಸುವಂತೆ ಕೋರಲಾಗಿತ್ತು. ಅದರಂತೆ ಜಲಜೀವನ್ ಮಿಷನ್ ಯೋಜನೆಯಡಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಹರ್ ಘರ್ ಜಲ್ ಎಂದು ಘೋಷಿಸಿದ ಗ್ರಾಮಗಳ ಪೈಕಿ, ಮುಖ್ಯವಾಗಿ ಕಾರ್ಯಾಚರಣೆ ಮತ್ತು ನಿರ್ವ ಹಣೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮದ ನೀರು ಮತ್ತು ನೈರ್ಮಲ್ಯ ಸಮಿತಿಯ ಒಬ್ಬ ಸದಸ್ಯ ಜತೆಗೆ ಅವರ ಕುಟುಂಬದ ಒಬ್ಬರನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಕೇಶವ ಕೋಟ್ಯಾನ್ ಆಯ್ಕೆ ನಡೆದಿದೆ.