ಉಡುಪಿ: ಜನವರಿ 13- ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಾಲ್ಕನೇಯ ದಿನದ ಸಪ್ತೋತ್ಸವದ ಅಂಗವಾಗಿ ರಥಬೀದಿಯ ಸುತ್ತಲೂ 26 ತಂಡಗಳಿಂದ ಕುಣಿತ ಭಜನೆಯು ಜರುಗಿತು.
ವಿಶೇಷವಾಗಿ ಪಂಚವಾದ್ಯ ಸೇವೆಯೊಂದಿಗೆ ಶ್ರೀ ಅನಂತೇಶ್ವರ ಚಂದ್ರಮೌಳೇಶ್ವರ ಹಾಗೂ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ರಥೋತ್ಸವವು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಅತ್ಯಂತ ವೈಭವದಿಂದ ನಡೆಯಿತು.