ಗಂಗೊಳ್ಳಿ : ಜನವರಿ 10:ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಬುಲ್‌ಟ್ರಾಲ್ ಹಾಗೂ ಅವೈಜ್ಞಾನಿಕವಾಗಿ ಬೆಳಕು ಹಾಯಿಸಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ತ್ರಾಸಿ ಬೀಚ್ ನಲ್ಲಿ ನೂರಾರು ಬೋಟ್‌ಗಳನ್ನು ಲಂಗರು ಹಾಕಿ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಸೀಮೆಎಣ್ಣೆ ದರ ಕಡಿಮೆ ಮಾಡುವಂತೆಯೂ ಪ್ರತಿಭಟನಕಾರರು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ, ಪ್ರಧಾನ ಕಾರ್ಯದರ್ಶಿ ಯಶವಂತ ಖಾರ್ವಿ, ಗೌರವಾಧ್ಯಕ್ಷ ಮದನ್ ಕುಮಾರ, ಗೌರವ ಸಲಹೆಗಾರ ನವೀನ್ ಚಂದ್ರ ಉಪ್ಪುಂದ, ದಕ್ಷಿಣ ಕನ್ನಡ ನಾಡ ದೋಣಿ ಮೀನುಗಾರರ ಅಧ್ಯಕ್ಷ ಪ್ರಕಾಶ ಸುವರ್ಣ, ಉತ್ತರ ಕನ್ನಡದ ಮೀನುಗಾರ ಮುಖಂಡ ಸೋಮನಾಥ ಮೊಗೆರಾ ಪಾಲ್ಗೊಂಡಿದ್ದರು.