ಕಾರ್ಕಳ : ಜನವರಿ 09: ವೀ ಒನ್ ಅಕ್ವ ಸೆಂಟರ್ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಕಾರ್ಕಳ ಇದರ ಹತ್ತಿರ ಇರುವ ಈಜು ಕೊಳದಲ್ಲಿ ಜನವರಿ 12 ಆದಿತ್ಯವಾರದಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಏರ್ಪಡಿಸಿದ್ದು ಬೇರೆ ಬೇರೆ ರೀತಿಯ ಸ್ಪರ್ಧೆಗಳು ಇದ್ದು ಬೆಳಿಗ್ಗೆ 9.00 ಗೆ ಗಣ್ಯರಿಂದ ಉದ್ಘಾಟನೆ ಆಗಲಿದೆ. ಈಗಾಗಲೇ ಹೆಸರು ನೊಂದಾಯಿಸುವ ಪ್ರಕ್ರಿಯೆ ಮುಗಿದಿದ್ದು ಉಭಯ ಜಿಲ್ಲೆಗಳ ತಾಲೂಕುಗಳಿಂದ ಸ್ಪರ್ಧಿಗಳು ಬರಲಿದ್ದಾರೆ. ಸಂಜೆಯ ಹೊತ್ತಿಗೆ ಸಮಾರೋಪ ಕಾರ್ಯಕ್ರಮವಿದ್ದು ಬಹುಮಾನ ವಿತರಣೆ ಕೂಡ ನಡೆಯಲಿದೆ. ಈ ಮೂಲಕ ಸಂಘಟಕರು ತಿಳಿಸಿರುತ್ತಾರೆ.