ಕಾರ್ಕಳ :ಜನವರಿ 08:ಎಸ್.ವಿ.ಟಿ ಯ ಪೂರ್ವ ವಿದ್ಯಾರ್ಥಿ ಹಾಗೂ ಮಹಾ ಕೊಡುಗೈ ದಾನಿ ಕೆ. ಕೃಷ್ಣಭಕ್ತರ 87ನೇ ಜನ್ಮ ದಿನಾಚರಣೆಯನ್ನು ಎಸ್.ವಿ.ಟಿ ಯ ಅಂಡಾರು ವಿಠಲ ರುಕ್ಮಿಣಿ ಕಿಣಿ ಸಾಂಸ್ಕೃತಿಕ ಸಭಾಭವನದ ಶ್ರೀಮತಿ ಕುಂಬಳೆ ಯಮುನಾ ಬಾಯಿ ಮಂಜುನಾಥ ಭಕ್ತ ವೇದಿಕೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕೆ.ಕೆ ಭಕ್ತರ ಮಗಳಾದ ಅರ್ಚನಾ ಶಾನ್ ಭೋಗ್ ಉಪಸ್ಥಿತರಿದ್ದರು.
ಎಸ್.ವಿ.ಟಿ ವಿದ್ಯಾ ಸಂಸ್ಥೆಗಳು ಶೈಕ್ಷಣಿಕವಾಗಿ ಮಾಡಿರುವ ಸಾಧನೆಯನ್ನು ಗುರುತಿಸಿ ಆ ಸಾಧನೆಗೆ ಕಾರಣರಾದ ಎಸ್.ವಿ.ಟಿ ವಿದ್ಯಾ ಸಂಸ್ಥೆಗಳ ಶ್ರೀ ವೆಂಕಟರಮಣ ದೇವಳದ ಆಡಳಿತ ಮಂಡಳಿ, ಎಸ್.ವಿ ಎಜುಕೇಶನ್ ಟ್ರಸ್ಟ್ ಹಾಗೂ ಸಮಸ್ತ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿ ಪರರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಾಣುವುದರ ಮೂಲಕ ಹೊಸ ಪರಂಪರೆಗೆ ಬುನಾದಿಯನ್ನು ಹಾಕಿ ತನ್ನ 87ನೇ ಜನ್ಮ ದಿನಾಚರಣೆಯ ಖುಷಿಯನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಸ್ಥಾನದ ಒಂದನೇ ಆಡಳಿತ ಮೊಕ್ತೇಸರ ಜಯರಾಮ್ ಪ್ರಭು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ವಿ ಎಜ್ಯುಕೇಷನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಕಾರ್ಕಳ ಕಮಲಾಕ್ಷಾ ಕಾಮತ್ ಮತ್ತು ಕಾರ್ಯದರ್ಶಿ ಕೆ.ಪಿ ಶೆಣೈ ಉಪಸ್ಥಿತರಿದ್ದು ಶುಭ ಹಾರೈಸಿದರು.
ಎಸ್.ವಿ. ಟಿ ವನಿತಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ್ ಶೆಟ್ಟಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾ ಯೋಗೇಂದ್ರ ನಾಯಕ್ ವಂದಿಸಿದರು. ಸುಮಂಗಲ ಪ್ರಭು ನಿರೂಪಿಸಿದರು.