ಉಡುಪಿ :ಜನವರಿ 08:ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯುವ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಜನವರಿ ೯ ರಿಂದ ಮೊದಲ್ಗೊಂಡು ಜನವರಿ ೧೫ರವರೆಗೆ ೭ ದಿನಗಳ ಕಾಲ ಅತ್ಯಂತ ವೈಭವ ದಿಂದ ನಡೆಯಲಿದೆ.
ಮಕರ ಸಂಕ್ರಮಣದ ಪವಿತ್ರ ಸದರ್ಭದಂದು ಸುಮಾರು ದಿನದಂದು ೮ ಶತಮಾನಗಳ ಹಿಂದೆ ಜಗದ್ಗುರು ಶ್ರೀಮನ್ಮದ್ವಾಚಾರ್ಯರು ದ್ವಾರಕೆಯಿಂದ ಬಂದ ಶ್ರೀ ಕೃಷ್ಣ ನನ್ನು ಭಕ್ತರಿಗಾಗಿ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು.
ಉಡುಪಿಯ ಅಪೂರ್ವ ಪೂಜಾ ಉತ್ಸವ ವೈಭವಗಳಿಂದ ಜಗತ್ತಿನ ಗಮನ ಸೆಳೆದ ಧಾರ್ಮಿಕ ಸಾಂಸ್ಕೃತಿಕ ನಗರಿಯಾದ ರಜತಪೀಠ ಪುರಿ ಎಂದು ಕೊಂಡಾಡಲ್ಪಟ್ಟ ಉಡುಪಿ ಯ ಲ್ಲಿ ನಡೆಯುವ ಈ ಸಪ್ತೋತ್ಸವ ವದಲ್ಲಿ ಭಾಗವಹಿಸಲು ಪೂಜ್ಯ ಪರ್ಯಾಯ ಶ್ರೀಪಾದರ ಆಹ್ವಾನದಂತೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಪ್ರಸಕ್ತ ಎಂಪಿ ಯಾದ ಜಾನ್ ಮುಲಾಯ್ ರವರು ಆಗಮಿಸಲಿದ್ದಾರೆ .
ಹಾಗೆ ತಮ್ಮ ಅಮೂಲ್ಯ ಭಾಗವತ ಪ್ರವಚನ ಗಳಿಂದ ಉಪರಾಷ್ಟ್ರಪತಿಯಾದಿಯಾಗಿ ಅನೇಕ ಗಣ್ಯರ ಗೌರವಕ್ಕೆ ಭಾಜನರಾದ ಉಡುಪಿಯ ಕೃಷ್ಣನ ಪರಮಭಕ್ತರಾದ ಗೌಡೀಯ ಮಾಧ್ವ ಮಠದ ಮಹಾಸ್ವಾಮಿಗಳಾದ ಶ್ರೀ ಪುಂಡರೀಕ ಗೋಸ್ವಾಮಿಯವರು ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಮಠದ ಪ್ರಕಟಣೆ ತಿಳಿಸಿದೆ.