ಕಾರ್ಕಳ :ಜನವರಿ 04:ದಿನಾಂಕ 02/1/25 ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಇದರ ವತಿಯಿಂದ ಶ್ರೀ ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆ ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು
ಹತ್ತನೇ ತರಗತಿಯ- ತನಿಷ, ಧನ್ಯ,ಸ್ಮೃತಿ, ಪ್ರಣಮ್ಯ,ಅವಿನ್ಯ,ಅಲೋಕ್, ಸೃಜನ್,ಪ್ರತ್ವೀಷ್, ಸುಹಾನ್,ಒಂಬತ್ತನೇ ತರಗತಿಯ ಗೀತ್ ವೈಷ್ಣವಿ ಹಾಗೂ ಶ್ರೇಯಸ್
ತಂಡವನ್ನು ಪ್ರತಿನಿಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಿಂದಿ ಭಾಷಣದಲ್ಲಿ ಎಂಟನೇ ತರಗತಿಯ ದೀಕ್ಷಾ ತೃತೀಯ ಸ್ಥಾನ ಹಾಗೂ ಸಂಸ್ಕೃತ ಭಾಷಣದಲ್ಲಿ ಎಂಟನೇ ತರಗತಿಯ ಶ್ರಾವಣಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ
ಇವರನ್ನು ಶಾಲಾ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.