ಉಡುಪಿ:ಜನವರಿ 04 :ಆಟೋ ಚಾಲಕನೋರ್ವ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿಯಲ್ಲಿ ಜನವರಿ 1ರಂದು ನಡೆದಿದೆ.
ಆತ್ಮಹತ್ಯೆಗೆ ಶರಣಾದ ಆಟೋ ಚಾಲಕನನ್ನು ಕಟಪಾಡಿಯ ಪಳ್ಳಿಗುಡ್ಡೆ ನಿವಾಸಿ ದೀಪಕ್ ಆರ್(34) ಎಂದು ಗುರುತಿಸಲಾಗಿದೆ
ಜನವರಿ 1 ರಂದು ದೀಪಕ್ ತನ್ನ ಕೋಣೆಯಲ್ಲಿ ಕಬ್ಬಿಣದ ಕೊಕ್ಕೆಯಿಂದ ನೇಣು ಬಿಗಿದುಕೊಂಡಿದ್ದಾನೆ ಎಂದು ವರದಿಯಾಗಿದೆ. ದೀಪಕ್ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.
ದೀಪಕ್ ಉಡುಪಿಯ ಕಲ್ಸಂಕ ಆಟೋ ಸ್ಟ್ಯಾಂಡ್‌ನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ . ತಮ್ಮ ಸರಳ ಸ್ವಭಾವ ಮತ್ತು ಸ್ನೇಹಪರ ನಡವಳಿಕೆಗೆ ಹೆಸರಾಗಿರುವ ದೀಪಕ್ ಅವರು ಅವಿವಾಹಿತರಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ