ಕಾರ್ಕಳ :ಜನವರಿ 02: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಿಯ್ಯಾರುವಿನಲ್ಲಿ ದಿನಾಂಕ 16-01-2025 ರಿಂದ 28-01-2025 ರವರೆಗೆ ಬ್ರಹ್ಮಶ್ರೀ ಬೆಳ್ಳಣ್ಣು ದೊಡ್ಡಮನೆ ಗುರುರಾಜ ತಂತ್ರಿ ಹಾಗೂ ಬ್ರಹ್ಮಶ್ರೀ ಬೆಳ್ಳಣ್ಣು ದೊಡ್ಡಮನೆ ಸರ್ವೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವರ ನೂತನ ದೇವಾಲಯ ಸಮರ್ಪಣಾಪೂರ್ವಕ ಪನಃ ಪ್ರತಿಷ್ಠೆ.ಅಷ್ಟಬಂಧ. ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಹೋತ್ಸವವು ಅತ್ಯಂತ ವೈಭವೋಪೇತವಾಗಿ ನೆರವೇರಲಿರುವುದು.
ಅತ್ಯಂತ ಪುಣ್ಯತಮವಾದ ಈ ಎಲ್ಲಾ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಯಪೂರ್ವಕವಾಗಿ ಶ್ರೀ ಪರಿದಾಸ್ ಭಟ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಿಯ್ಯಾರು ಶ್ರೀ ಸತ್ಯೇಂದ್ರ ನಾಯಕ್ ವ್ಯವಸ್ಥಾಪನಾ ಸಮಿತಿ ಶ್ರೀ ಕಿಶೋರ್ ಶೆಟ್ಟಿ ಜೀರ್ಣೋದ್ದಾರ ಸಮಿತಿ ಶ್ರೀ ಆನಂದ ಎಂ. ಶೆಟ್ಟಿ, ಮಂಜಿಮನೆ.ಶ್ರೀ ಅಶೋಕ್ ಶೆಟ್ಟಿ, ಕಳಾಳದ ನಡುಮನೆ ಮುಂಬೈ ಸಮಿತಿ ಸರ್ವ ಸದಸ್ಯರು, ಜೀರ್ಗೊದ್ಧಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ಮತ್ತು ಐದೂರು ಮಾಗಣೆಯ ಊರ ಪರವೂರ ಭಗವಾಧ್ಯಕ್ಷರು ಹಾಗೂ ಹತ್ತು ಸಮಸ್ತರು ವಿನಂತಿಸಿದ್ದಾರೆ