ಮಂಗಳೂರು: ಜನವರಿ 02: ಮಂಗಳೂರಿನಲ್ಲಿ ನಿನ್ನೆ ಬುಧವಾರ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ
ಮೇರಿಹಿಲ್ ಹೆಲಿಪ್ಯಾಡ್‌ಗೆ ಹೋಗುವ ರಸ್ತೆಯಲ್ಲಿ ಸಂಜೆ ವೇಳೆ ಸಂಚರಿಸುತ್ತಿದ್ದ ವೋಕ್ಸ್‌ವ್ಯಾಗನ್ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾರು ನಿಲ್ಲಿಸಿ ಕಾರಿನಲ್ಲಿದ್ದ ನಾಲ್ವರು ಕೂಡಲೇ ಕೆಳಗಿಳಿದಿದ್ದಾರೆ.
ಅಕ್ಕಪಕ್ಕದಲ್ಲಿದ್ದವರು ನೀರು ತಂದು ಸುರಿದು ಬೆಂಕಿ ನಿಯಂತ್ರಿಸಿದರು. ಕದ್ರಿ ಅಗ್ನಿಶಾಮಕ ದಳದವರು ಕೂಡ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಕಾರಿನ ಎಂಜಿನ್ ಭಾಗ ಸುಟ್ಟು ಹೋಗಿದೆ ಎನ್ನಲಾಗಿದೆ