ಬ್ರಹ್ಮಾವರ :ಜನವರಿ 01: ಗರ್ಭಿಣಿ ಮಹಿಳೆಯನ್ನು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ108 ಅರೋಗ್ಯ ಕವಚ ಆಂಬುಲೆನ್ಸ್‌ನಲ್ಲಿ ಸುರಕ್ಷಿತ ಹೆರಿಗೆಯಾದ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗಿನ ಜಾವ ಕೊಕ್ಕರ್ಣೆಯ 108 ಆಂಬುಲೆನ್ಸ್‌ಗೆ ಕರೆ ಬಂದಿತ್ತು. ಅದರಂತೆ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮಕ್ಕೆ ಧಾವಿಸಿದ 108 ಆಂಬುಲೆನ್ಸ್ ಸಿಬ್ಬಂದಿ, ರಾಜೇಶ್ವರಿ (27) ಎಂಬ ಗರ್ಭಿಣಿಯನ್ನು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ
ತಕ್ಷಣ ಸಿಂಬ್ಬoದಿ ಮತ್ತು ಸಹಾಯಕರು ಸುರಕ್ಷಿತ ಹೆರಿಗೆಗೆ ಸಹಾಯ ಮಾಡಿದ್ದಾರೆ. ಬಳಿಕ ಚಾಲಕ ಪ್ರಕಾಶ್ ತಾಯಿ ಮತ್ತು ಮಗುವನ್ನು ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ ಸದ್ಯ ತಾಯಿ ಮತ್ತು ಮಗು ಅರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.