ಕಾರ್ಕಳ :ಡಿಸೆಂಬರ್ 31:ಇಲ್ಲಿನ ಜ್ಯುವೆಲರಿ ಅಂಗಡಿ ಒಂದರಲ್ಲಿ ಇತ್ತೀಚಿಗಷ್ಟೇ ನಡೆದ ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ .
ಧಾರವಾಡದ ಜನ್ನತ್ ನಗರದ ನಿವಾಸಿ ಮೊಹಮ್ಮದ್ ಅಲಿಖಾನ್ ಅಲಿಯಾಸ್ ಇರಾನಿ ಅವನಿ (32) ಬಂಧಿತ ಆರೋಪಿ.
ಆರೋಪಿಯಿಂದ 1.78 ಲಕ್ಷ ರೂ.ಮೌಲ್ಯದ 26 ಗ್ರಾಂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಡಿವೈಎಸ್ ಪಿ ಅರವಿಂದ್ ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಮಂಜಪ್ಪ ಅವರ ನೇತೃತ್ವದಲ್ಲಿ ಪಿಎಸ್ ಐಗಳಾದ ಸಂದೀಪ್ ಕುಮಾರ್ ಶೆಟ್ಟಿ, ಶಿವಕುಮಾರ್, ಸಿಬಂದಿಗಳಾದ ಗೋಪಾಲ್, ಸಂತೋಷ್, ಶ್ರೀನಿವಾಸ್, ಸದಾನಂದ್, ದರ್ಶನ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಕಳದ ಮೂರು ಮಾರ್ಗ ಬಳಿ ಪ್ರಣವ್ ಜುವೆಲರಿ ಕಳ್ಳತನ ನಡೆದಿತ್ತು, ಕಳ್ಳತನ ದ ಸಿಸಿ ಟಿವಿ ದ್ರಶ್ಯ ವೈರಲ್ ಆಗಿತ್ತು,