ಕಾರ್ಕಳ :ಡಿಸೆಂಬರ್ 30: ರಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬಕಾಸ್ ಕಾರ್ಕಳ ಇವರು ತರಬೇತಿಗೊಳಿಸಿರುವ ರಾಷ್ಟ್ರಮಟ್ಟದ ಅಬಕಾಸ್ ಚಾಂಪಿಯನ್ ಶಿಪ್ ನಲ್ಲಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ 4ನೇ ತರಗತಿ ಪ್ರದ್ವಿಕ್, 5ನೇ ತರಗತಿ ಗಾನ್ವಿ. ಜಿ, 5ನೇ ತರಗತಿಯ ಧನ್ವಿ ಮತ್ತು 7ನೇ ತರಗತಿಯ ಪ್ರೇಕ್ಷ ಇವರು ಚಾಂಪಿಯನ್ ಶಿಪ್ ನ್ನು ಗಳಿಸಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ ಯವರು, ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುರೇಖಾ ರಾಜ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದರು.