ಕಾರ್ಕಳ :ಡಿಸೆಂಬರ್ 30:ಕಳೆದ 3 ದಿನಗಳಿಂದ ಲಕ್ಷಾಂತರ ಮಂದಿ ಕಾರ್ಲೊತ್ಸವದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದಾರೆ.ಇಂದು ಸೋಮವಾರದ ದಿನ ಕಾರ್ಲೊತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಇಲ್ಲಿ ನಡೆದ ಕಾರ್ಯಕ್ರಮಗಳು ಐತಿಹಾಸಿಕವಾಗಿ ಎಲ್ಲರ ಮನ ಮುಟ್ಟಿದೆ.
ಇಂದು ಸೋಮವಾರ ಕಾರ್ಲೊತ್ಸವದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ಈ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ತಂಡಗಳು ಭಾಗವಹಿಸಲಿದ್ದಾರೆ.
ಡ್ರಾಮಾ ಜೂನಿಯರ್ಸ್ ನ ಅಪೂರ್ವ ಮಾಳ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನೃತ್ಯ ಪ್ರದರ್ಶನ ನೋಡಲಿಕ್ಕಾಗಿ ಇಂದು ಕೂಡ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ವಾಯೋಲಿನ್ ಚೆಂಡೆ ಕೂಡ ನಡೆಯಲಿದೆ
ಅಮ್ಯೂಸ್ ಮೆಂಟ್ ಪಾರ್ಕ್, ಆಹಾರ ಮೇಳ, ವಸ್ತು ಪ್ರದರ್ಶನ ಕೂಡ ನಡೆಯಲಿದೆ.