ಉಡುಪಿ :ಡಿಸೆಂಬರ್ 29:ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವ ದ ಅಂಗವಾಗಿ ಡಿಸೆಂಬರ್ 28ರಂದು ಭಗವದ್ಗೀತಾ ಯಜ್ಞ ವು ಸಂಪನ್ನಗೊಂಡಿತು
ದೇಶ ವಿದೇಶಗಳಿಂದ ಆಗಮಿಸಿದ್ದ ಶ್ರೀ ಮಠದ ಭಕ್ತರು ಸಮಗ್ರ ಭಗವದ್ಗೀತಾ ಪಾರಾಯಣ ವನ್ನು ಮಾಡಿದರು .
ಶ್ರೀ ಮಠದ ಯೋಗೇಂದ್ರ ಭಟ್ ಹೋಮವನ್ನು ನೆರವೇರಿಸಿದರು.
ಪೂಜ್ಯ ಪರ್ಯಾಯ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ಭಗವದ್ಗೀತೆಯಲ್ಲಿ ಎಲ್ಲ ಕಾರ್ಯಗಳನ್ನು ಯಜ್ಞವಾಗಿ ಪರಿವರ್ತಿಸಿಕೊಂಡು ತನ್ಮೂಲಕ ಭಾಗವದನುಗ್ರಹವನ್ನು ಸಂಪಾದಿಸಿಕೊಳ್ಳುವ ಉಪಾಯವನ್ನು ಶ್ರೀ ಕೃಷ್ಣ ಪರಮಾತ್ಮ ಲೋಕಕ್ಕೆ ತಿಳಿಸಿದ್ದಾನೆ. ಅಂತಹ ಪವಿತ್ರ ಗ್ರಂಥ ದ ಶ್ಲೋಕಗಳ ಮೂಲಕವೇ ಯಜ್ಞವನ್ನು ಆಚರಿಸುವುದು ಬಹಳ ಔಚಿತ್ಯ ಪೂರ್ಣ , ಭಾಗವಹಿಸಿದವರೆಲ್ಲರಿಗೂ ಶ್ರೀಕೃಷ್ಣನ ಪರಮಾನುಗ್ರಹ ವಾಗಲಿ ಎಂದು ಹಾರೈಸಿದರು. ಪೂಜ್ಯ ಪರ್ಯಾಯ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.