ಉಡುಪಿ:ಡಿಸೆಂಬರ್ 28: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಹರೇ ಕೃಷ್ಣ ಮಣಿಪಾಲ್ ಇಲ್ಲಿಯ ಕೃಷ್ಣ ಭಕ್ತರು ಶ್ರೀ ಭಗವದ್ಗೀತೆ ಅಭಿಯಾನ ಅಂಗವಾಗಿ ಪ್ರತಿಯೊಂದು ಶಾಲೆ, ಕಾಲೇಜು ಹಾಗೂ ಗ್ರಂಥಾಲಯಗಳಲ್ಲಿ ಪರಮ ಪವಿತ್ರವಾದ ಶ್ರೀ ಭಗವದ್ಗೀತೆಯ ಪ್ರತಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವದ ಅಂಗವಾಗಿಶ್ರೀ ಕ್ಷೇತ್ರದ ವತಿಯಿಂದ ನಡೆಸಲ್ಪಡುವ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಹಾಗೂ ಪೋಷಕರಿಗೆ
ಉಚಿತವಾಗಿ ಭಗವದ್ಗೀತೆಯ ಪ್ರತಿಯನ್ನು ವಿತರಿಸಿದರು
ಶ್ರೀ ಕ್ಷೇತ್ರದ ವತಿಯಿಂದ ನಡೆಸಲ್ಪಡುವ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಪೋಷಕರಿಗೆಹಾಗೂ ಶಾಲಾ ಗ್ರಂಥಾಲಯದಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಭಗವದ್ಗೀತೆಯ ಪ್ರತಿಯನ್ನು ಇರಿಸಲಾಯಿತು…
ಶಾಲೆಯ ಆವರಣದಲ್ಲಿ ಶಾಲಾ ಸಂಸ್ಥಾಪಕರಾದ ಶ್ರೀ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಗುರೂಜಿಯವರು ಮಾತನಾಡಿ ಭಗವದ್ಗೀತೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿರುವುದಲ್ಲದೆ ಮೂರು ಬಾರಿ ಬರೆದಿದ್ದು ಅದೆಷ್ಟು ಮಹಿಮಾಾನ್ಮಿತವಾದದ್ದು ಅದರಿಂದ ಪಡೆದುಕೊಂಡ ಸತ್ಯದ ವಿಚಾರವನ್ನು ತಿಳಿಸಿ ತಮ್ಮ ದೈವಿಕ ಹರ್ಷವನ್ನು ಸಭೆಗೆ ಹಂಚಿಕೊಂಡರು..
ಹರೇ ಕೃಷ್ಣ ಮಣಿಪಾಲದ ಕೃಷ್ಣ ಭಕ್ತರಲ್ಲರು ಸೇರಿ ಶ್ರೀ ಗುರೂಜಿಯವರನ್ನು ಗೌರವಿಸಿ ಸನ್ಮಾನಿಸಿದರು.. ಕ್ಷೇತ್ರ ಸಂಪ್ರದಾಯದಂತೆ ಹರೇ ಕೃಷ್ಣ ಮಣಿಪಾಲ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಸ ರಸಿಕ ಪ್ರಭು ಅವರನ್ನು ಹಾಗೂ ಉತ್ತಮ ನರಸಿಂಹ ಪ್ರಭು, ಉದ್ಭವ ಪ್ರಾಣಕೃಷ್ಣದಾಸ್, ಅಸಿಮಾನಂದ ಕೃಷ್ಣ ನಾಮದಾಸ್, ಅಭಯ ಚಂದ್ರ,ದಿನೇಶ್ ಪ್ರಭು,ಶ್ರೀಮತಿ ಪ್ರಸನ್ನ ಗೋಪಿಕಾ ಇವರೆಲ್ಲರನ್ನು ಕ್ಷೇತ್ರ ಸಂಪ್ರದಾಯದಂತೆ ಶ್ರೀ ದುರ್ಗಾದಿ ಶಕ್ತಿ ದೇವಿಯ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು..
ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ರಮಾನಂದ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಭಗವದ್ಗೀತೆಯ ಮಹಿಮೆಯನ್ನು ಅದರ ಅಧ್ಯಯನದ ಪ್ರಯೋಜನವನ್ನು ತಿಳಿಸಿದರು..
ಶಾಲಾ ಸಂಯೋಜಕೀ ಹಾಗೂ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಅವರ ಕಾರ್ಯ ಶೈಲಿ ಎಲ್ಲರ ಪ್ರಶಂಸೆಗೆ ಕಾರಣವಾಯಿತು.. ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಶರ್ಮ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಣೆ ಗೈದರು.