ಕಾರವಾರ : ಡಿಸೆಂಬರ್ 26:ಪಿಗ್ಮಿ ಸಂಗ್ರಹಿಸಿ ಜೀವನ ನಡೆಸುತ್ತಿದ್ದ ಮಹಿಳೆಯನ್ನು ಆಕೆಯ ಮನೆಯ ಹೆಂಚು ತೆಗೆದು ಒಳ ನುಗ್ಗಿ ಕೊಲೆಗೈದ ಘಟನೆ ಸಿದ್ದಾಪುರ ಪಟ್ಟಣದ ಬಸವನಗಲ್ಲಿಯಲ್ಲಿ ನಡೆದಿದೆ
ಗೀತಾ ಪ್ರಭಾಕರ ಹುಂಡೇಕರ್ (72) ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ ಗೀತಾ ಅವರು ವಿನಾಯಕ ಸೌಹಾರ್ದ ಕೋಅಪರೇಟಿವ್ ಸೊಸೈಟಿಗೆ ದಿನವೂ ಐದ ರಿಂದ ಹತ್ತು ಸಾವಿರ ಪಿಗ್ಮಿ ಸಂಗ್ರಹಿಸಿ ,ಸೊಸೈಟಿಗೆ ತುಂಬುತ್ತಿದ್ದರು
ಇವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಇದನ್ನರಿತ ದುಷ್ಕರ್ಮಿಗಳು ಹಣಕ್ಕಾಗಿ ಮಹಿಳೆಯ ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ ಆರೋಪಿಗಳು ಎನ್ನಲಾಗಿದೆ
ಈ ಕುರಿತು ಗೀತಾ ಅವರ ಅಳಿಯ ರಾಘವೇಂದ್ರ ನಾಯ್ಕ ಪೊಲೀಸರಿಗೆ ದೂರು ನೀಡಿದ್ದು ಸಿದ್ದಾಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ