ಉಡುಪಿ :ಡಿಸೆಂಬರ್ 24: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ಕಾಲು ಗ್ರಾಮದ ಬೀಜಂಟ್ಲ ನಿವಾಸಿ ಮನೋಜ್(39) ಅವರು ಡಿ. 18 ರಂದು ಬೆಳಗ್ಗೆ ಮನೆಯಿಂದ ರೂ.500 ಹಣ ಪಡೆದುಕೊಂಡು ಕಟಪಾಡಿಗೆ ಹೋಗಿ ಬರುತ್ತೇನೆಂದು ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ
ನೆರೆಕೆರೆ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಈವರೆಗೆ ಪತ್ತೆಯಾಗದಿರುವ ಕಾರಣ ಇದೀಗ ಅವರ ಪತ್ನಿ ಸುನೀತ ಕುಲಾಲ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.