ಉಡುಪಿ : ಡಿಸೆಂಬರ್ 23 : ಕಟಪಾಡಿ ಪೇಟೆಯಲ್ಲಿ ಶಿಥಿಲಗೊಂಡಿದ್ದ ನೀರಿನ ಟ್ಯಾಂಕೊಂದನ್ನು ತೆರವು ಮಾಡಲಾಗಿದೆ.ಆದರೆ ಈ ಸಂದರ್ಭದಲ್ಲಿ ಪಕ್ಕದ ಕಟ್ಟಡಕ್ಕೆ ಹಾನಿಯಾಗಿದೆ.
ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡಿದ್ದ ಈ ನೀರಿನ ಟ್ಯಾಂಕ್ ಕುಸಿಯುವ ಹಂತದಲ್ಲಿತ್ತು ಹಾಗಾಗಿ ಟ್ಯಾಂಕಿಯನ್ನು ತೆರವುಗೊಳಿಸಿಲು ಸ್ಥಳೀಯ ಕಟಪಾಡಿ ಪಂಚಾಯತ್ ತೀರ್ಮಾನ ಮಾಡಿತ್ತು.
ಇದೀಗ ಪುರಾತನ ಟ್ಯಾಂಕಿಯನ್ನು ಉರುಳಿಸಿ ನೆಲಸಮ ಮಾಡಲಾಯಿತು. ಆದರೆ ಈ ವೇಳೆ ಪಕ್ಕದಲ್ಲಿದ್ದ ಕ್ಲಿನಿಕ್ ಹಾಗೂ ಕಟ್ಟಡಕ್ಕೆ ಹಾನಿ ಸಂಭವಿಸಿದ್ದು ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ವಹಿಸದೆ ಇರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ