ಕಾರ್ಕಳ: ಡಿಸೆಂಬರ್ 23: ನಗರದ ಎಸ್. ವಿ.ಟಿ. ಶಾಲಾ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ “ವಿಶ್ವ ಧ್ಯಾನ ದಿನಾಚರಣಾ” ಸಮಾರಂಭ ಜರಗಿತ್ತು, ಸಮಾರಂಭದ ಆಧ್ಯಕ್ಷತೆಯನ್ನು ಮುಂಬೈಯ ರಾಜಯೋಗ ಶಿಕ್ಷಕಿ ರಾಜಯೋಗಿನಿ ಬಿ. ಕೆ. ಸುಕೇತಾ ಶೆಟ್ಟಿಯವರು ವಹಿಸಿದ್ದು, ಧ್ಯಾನ ಮಾಡಲು ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆಯಿದೆ, ಮೊತ್ತಮೊದಲು ನಾನು ಯಾರು, ಪರಮಾತ್ಮ ಯಾರು ಎಂಬುದನ್ನು ಅರಿತು ಧ್ಯಾನ ಮಾಡುವುದರಿಂದ ಪರಮಾತ್ಮ ಪ್ರೀತಿ ಪಡೆಯಲು ಸಾದ್ಯ. ಪ್ರತಿದಿನ ಧ್ಯಾನಾಭ್ಯಾಸದಿಂದ ಆಂತರಿಕ ಶಾಂತಿ, ಜಾಗತಿಕ ಸದ್ಭಾವನೆ ಮಾನಸಿಕ ಸ್ಪಷ್ಟತೆ, ಒತ್ತಡದಿಂದ ಮುಕ್ತಿಯ ಜೊತೆಗೆ ಆರೋಗ್ಯ ಲಾಭ, ಹಾಗೂ ಭಾವನಾತ್ಮಕ ಸ್ಥಿರತೆಯೊಂದಿಗೆ, ಸಂಬಂಧ ದಲ್ಲಿ ಸುಧಾರಣೆಯಾಗುತ್ತದೆ ಎಂದರು.
ಮುಖ್ಯಅತಿಥಿಯಾಗಿ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ ಸಂಸ್ಕೃತ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಶೆಣೈಯವರು ಭಗವದ್ಗೀತೆಯ 18 ಅಧ್ಯಾಯದ ಕಿರುಪರಿಚಯ ನೀಡುತ್ತಾ ಆತ್ಮವು ಬೆಂಕಿಯಿಂದ ಸುಡುವುದಿಲ್ಲ, ಆತ್ಮವನ್ನು ಆಯುಧದಿಂದ ಕತ್ತರಿಸಲಾಗುವುದಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ಆತ್ಮಜ್ಞಾನ ಅವಶ್ಯವೆಂದರು. ಪೆಲತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ರಮೇಶ ನಾಯಕ್‌ರವರು ಧ್ಯಾನದ ಸಾರ ಮುಕ್ತಿಯಾಗಿದೆ. ಮುಕ್ತಿಯನ್ನು ಪಡೆಯಲು ಸತ್ಯ ಜ್ಞಾನ ಬೇಕಾಗಿದೆ. ಇಂತಹ ಜ್ಞಾನ ತಿಳಿಸುವಂತಹ ಆಧ್ಯಾತ್ಮಿಕ ಸೇವಾಕೇಂದ್ರಗಳು ಜಾಸ್ತಿಯಾಗಬೇಕಾಗಿದೆ ಎಂದರು. ಭಗವದ್ಗೀತಾ ಪಾಠಶಾಲಾ ಶಿಕ್ಷಕಿ, ಶ್ರೀಮತಿ ಜಿ. ವಿಜಯಲಕ್ಷ್ಮಿ ಕಿಣಿಯವರು ಮಕ್ಕಳಿಂದ ಭಗವದ್ಗೀತೆಯ ಜ್ಞಾನದ ಸಾರ ಪ್ರಾರಂಭವಾಗಿ ನೈತಿಕ ಶಿಕ್ಷಣವನ್ನು ಮನೆಯವರು ಕೊಡಬೇಕಾಗಿದೆ ಎಂದರು. ಬಿ.ಕೆ. ಅನ್ನಪೂರ್ಣ ಸಂಸ್ಥೆಯ ಪರಿಚಯ ನೀಡಿದರು. ಬಿ.ಕೆ. ಸ್ಮಿತಾ ನಾಯರ್ ರಾಜಯೋಗದಿಂದಾದ ಲಾಭ ತಿಳಿಸಿದರು. ಕುಮಾರಿ ಸನ್ನಿಧಿ ಪ್ರಾರ್ಥನೆ ಮಾಡಿದರು. ಬಿ. ಕೆ. ವರದರಾಯ ಪ್ರಭು ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು. ಸೇವಾಕೇಂದ್ರದ ಸಂಚಾಲಕಿ ಬಿ. ಕೆ. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.