ಉಡುಪಿ : ಡಿಸೆಂಬರ್ 21:ರಂಗಭೂಮಿ(ರಿ) ಉಡುಪಿ ವತಿಯಿಂದ ಆಯೋಜಿಸಿದ್ದ ರಂಗಭೂಮಿ ರಂಗಶಿಕ್ಷಣ 2024 -ಮಕ್ಕಳ ನಾಟಕೋತ್ಸವದ ಉದ್ಘಾಟನೆಯನ್ನು ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರು
ಉಡುಪಿಯ ರಂಗಭೂಮಿ ಸಂಸ್ಥೆ ಉಡುಪಿಯ ಆಯ್ದ 12 ಪ್ರೌಢಶಾಲೆಯ ಮಕ್ಕಳಿಗೆ ಪ್ರಾರಂಭಿಸಿರುವ ‘ರಂಗಭೂಮಿ ಶಿಕ್ಷಣ’ದಲ್ಲಿ ಭಾಗಿಯಾದ ಮಕ್ಕಳಿಂದ ಮಕ್ಕಳ ನಾಟಕೋತ್ಸ’ವನ್ನು ಡಿ.21 ಮತ್ತು 28ರ ಶನಿವಾರಗಳಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದೆ.
ಇಂದು ಬೆಳ್ಳಿಗ್ಗೆ 11:15ರಿಂದ ಸಂಜೆ 4ರವರೆಗೆ ಒಟ್ಟು ಐದು ತಂಡಗಳು ತಮ್ಮನಾಟಕವ ನ್ನು ಪ್ರದರ್ಶಿಸಿದರು .
ಸಮಾರಂಭದಲ್ಲಿ ಶಿವರಾಮ ಶೆಟ್ಟಿ, ಎಂ ಜಿ ಎಂ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಕಾರಂತರು, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಡಿ.28ರಂದು ಬೆಳಗ್ಗೆ 10ರಿಂದ ಸಂಜೆ 5:45ರವರೆಗೆ ಒಟ್ಟು ಏಳು ತಂಡಗಳು ತಮ್ಮ ನಾಟಕಗಳನ್ನು ಪ್ರದರ್ಶಿಸಲಿವೆ. ಮಕ್ಕಳ ಸಮಗ್ರ, ಬಹುಮುಖಿ ವ್ಯಕ್ತಿತ್ವದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಂಗಭೂಮಿಯ ಈ ಹೊಸ ಯೋಜನೆ ಹಮ್ಮಿಕೊಂಡಿದೆ