ಉಡುಪಿ : ಡಿಸೆಂಬರ್ 19:ಪರ್ಯಾಯ ಶ್ರೀಪುತ್ತಿಗೆ ಶ್ರೀ ಕೃಷ್ಣ ಮಠದಿಂದ ನಡೆಯುವ ಬೃಹತ್ ಗೀತೋತ್ಸವದ ಸುಸಂದರ್ಭದಲ್ಲಿ ಗಂಗಾವತಿ ಪ್ರಾಣೇಶ್ ತಂಡದಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರಗಿತು.
ಗಂಗಾವತಿ ಪ್ರಾಣೇಶ್ , ನರಸಿಂಹ ಜೋಶಿ, ಬಸವರಾಜ ಮಹಾಮನಿ ಯವರು ಕಿಕ್ಕಿರಿದ ಸಭೆಯನ್ನು ನಗೆಗಡದಲ್ಲಿ ತೇಲಿಸಿದರು.
ಈ ಮುನ್ನ ನಡೆದ ಸಭೆಯಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರು ಭಗವದ್ಗೀತೆಯಲ್ಲೂ ಶ್ರೀಕೃಷ್ಣ ನಗುನಗುತ್ತಲೇ ಅರ್ಜುನನ ದುಗುಡ ದುಮ್ಮಾನಗಳಿಗೆ ಉತ್ತರಿಸಲು ಶುರು ಮಾಡಿದ. ಹೀಗೆ ಯಾವುದೇ ಸಮಸ್ಯೆಗಳಿಗೆ ನಗುವೂ ಪರಿಹಾರದ ಉತ್ತರ ವಾಗಬಲ್ಲುದು ಎಂದು ತೋರಿಸಿಕೊಟ್ಟ.
ಯಾವ ಪ್ರಾಣಿಗೂ ನೀಡದ ಈ ವರವನ್ನು ಮನುಜನಿಗೆ ಭಗವಂತ ಕರುಣಿಸಿದ. ಇಂತಹ ನಗುವಿನ ಹಾಸ್ಯೋತ್ಸವ ಈ ಗೀತೋತ್ಸವದಲ್ಲಿ ಸಕಾಲಿಕ ವಾಗಿದೆ,
ನಮ್ಮೆಲ್ಲಾ ಜೀವನದ ಸಮಸ್ಯೆಗಳು ನಗುವಿನಿಂದ ಪರಿಹಾರವಾಗಬಲ್ಲುದು.ಎಂದು ಪರ್ಯಶ್ರೀಪಾದರು ನುಡಿದು ಪ್ರಾಣೇಶ್ ತಂಡ ದವರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಭಗವದ್ಗೀತೆಗಾಗಿಯೇ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಗೀತಾ ಮಾತೆಯರೆಂದು ಮಾನ್ಯೆಯರಾದ, ಶ್ರೀಮತಿ ಲಕ್ಷ್ಮಿ ಶಾನಭಾಗ್, ಮೀರಾ ಜಿ ಪೈ,ಕೆ ಪ್ರೇಮಾ ಮತ್ತು ಕುಶಾಲನಗರದ ಪದ್ಮಾ ಪುರುಷೋತ್ತಮ್, ಪಿರಿಯಾ ಪಟ್ಟಣದ ರಮಾ ವಿಜಯೇಂದ್ರ ರವರನ್ನು ಸನ್ಮಾನಿಸಲಾಯಿತು.
ಈ ಬೃಹತ್ ಗೀತೋತ್ಸವದಲ್ಲಿ ಬಹು ಜನರ ಬೇಡಿಕೆಯಂತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ.