ಮಂಗಳೂರು :ಡಿಸೆಂಬರ್ 19:ಮಂಗಳೂರು ಮಹಾನಗರ ಪಾಲಿಕೆಯು ಅಗತ್ಯ ಹುದ್ದೆ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಿದೆ. ಈ ಕೆಳಗಿನಂತೆ ಹುದ್ದೆಯ ಕುರಿತು ಮಾಹಿತಿಗಳನ್ನು ತಿಳಿದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಕರ್ನಾಟಕ ಮಹಾನಗರಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಏಕರೂಪದ ವೃಂದ ಮತ್ತು ನೇಮಕಾತಿ ನಿಯಮ 2011 ರಂತೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಓರ್ವ ಸಹಾಯಕ ಕಾನೂನು ಅಧಿಕಾರಿಯನ್ನು ಪೂರ್ಣ ಅಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯ ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು, ಇವರ ಆದೇಶದಂತೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಗೊಳಿಸುವ ಹುದ್ದೆಯ ವಿದ್ಯಾರ್ಹತೆ ಹಾಗೂ ಸೇವೆಯ ಅನುಭವ ಈ ಕೆಳಗಿನಂತಿದೆ.
ಈ ಹುದ್ದೆಗೆ ಗುತ್ತಿಗೆ ಆಧಾರದ ಷರತ್ತಿಗೆ ಅನ್ವಯಿಸಿ ನೇಮಕಾತಿಗಾಗಿ ಪತ್ರಿಕಾ ಪುಕಟಣೆ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಜಿದಾರರು ಮೇಲಿನ ಅರ್ಹತೆಗಳಿಗೆ ಸಂಬಂಧಿತ ಪ್ರಮಾಣಪತ್ರ ಹಾಗೂ ಅನುಭವ ಪ್ರಮಾಣ ಪತ್ರದೊಂದಿಗೆ ಬಯೋಡಾಟಾವನ್ನು ಸ್ಕ್ಯಾನ್ ಮಾಡಿ, ಅರ್ಜಿ ಸಲ್ಲಿಸುವುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03-01-2025 ರಂದು ಸಂಜೆ 4.00 ಗಂಟೆಯೊಳಗೆ.ಅರ್ಜಿ ಸಲ್ಲಿಸಲು ಕಛೇರಿಯ ಇ- ಮೇಲ್ ವಿಳಾಸ: mangaloremcc.est@gmail.com