ಉಡುಪಿ : ಡಿಸೆಂಬರ್ 19:ರಾಜ್ಯ ಸರ್ಕಾರ ಮಾರ್ಚ್ ತಿಂಗಳಲ್ಲಿ ಮಂಡಿಸುವ ಬಜೆಟ್ ನಲ್ಲಿ ಕಾರ್ಮಿಕ ವರ್ಗದ ಬೇಡಿಕೆಗಳನ್ನು ಈಡೇರಿಸಲು ಹಣ ನೀಡಬೇಕು ಎಂದು ರಾಜ್ಯ ವ್ಯಾಪಿ ನೀಡಿರುವ ಕರೆಯ ಮೇರೆಗೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು ಎರಡನೇ ದಿನದ ಧರಣಿಯನ್ನು ದ್ದೇಶಿಸಿ ಸಿಐಟಿಯು ಜಿಲ್ಲಾ ಮುಖಂಡರಾದ ಎಚ್ ನರಸಿಂಹ ಮಾತನಾಡಿದರು
ಕಾರ್ಮಿಕ ವರ್ಗದ ಬೇಡಿಕೆಗಳು ಇಂದು ನಿನ್ನೆಯದಲ್ಲ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟ ನಡೆಸಿ ಹಲವು ಸೌಲಭ್ಯಗಳನ್ನು ಪಡೆದಿದ್ದೇವೆ ಆದರೆ ಸ್ವಾತಂತ್ರ್ಯ ಪಡೆದು 77 ವರ್ಷಗಳ ನಂತರವೂ ಕನಿಷ್ಠ ಕೂಲಿಗಾಗಿ,ಕಾರ್ಮಿಕರ ಸೌಲಭ್ಯಗಳಿಗಾಗಿ ಹೋರಾಟ ಧರಣಿ ಮಾಡಬೇಕಾದ ದುಸ್ಥಿತಿ ಬಂದಿದೆ ಎಂದು ಹೇಳಿದರು.
ಅವರು ಮಣಿಪಾಲದ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ನಡೆಯುತ್ತಿರುವ ಧರಣಿಯನ್ನು ದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯವು ನಮ್ಮ ಮಂತ್ರಿ ಮಹೋದ್ಯಯರಿಗೆ ಒಬ್ಬೋಬ್ಬರೂ ಒಂದು ವಿಮಾನದಲ್ಲಿ ತಿರುಗಾಡಲು ಖರೀದಿ ಮಾಡಿದ್ದಾರೆ ಆದರೆ ಕಾರ್ಮಿಕ ವರ್ಗದ ಬೇಡಿಕೆಗಳನ್ನು ಈಡೇರಿಸಲು ಹಣದ ಕೊರತೆ ಹೇಳುತ್ತಿದ್ದಾರೆ ಎಂದು ಆಪಾದಿಸಿದರು.ವಿದೇಶಿ ಬಂಡವಾಳಗಾರರನ್ನು ಕೊಬ್ಬಿಸಲು ಮೋದಿ ಅವರು ಕರೋನ ಕಾಲದಲ್ಲಿ ತಂದ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ತೀರ್ಮಾನಿಸಿದ್ದಾರೆ ಇದನ್ನು ರಾಜ್ಯ ಸರಕಾರ ಜಾರಿ ಮಾಡಬಾರದು ಮೋದಿ ನೀತಿ ಕಾಂಗ್ರೆಸ್ ಜಾರಿ ಮಾಡಿದರೆ ರಾಜ್ಯದ ಲಕ್ಷಾಂತರ ಕಾರ್ಮಿಕರು ಫೆಬ್ರವರಿ ತಿಂಗಳಲ್ಲಿ ವಿಧಾನಸೌಧಕ್ಕೆ ಬರಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ: ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ಅಂಬೇಡ್ಕರ್ ಸಹಾಯ ಹಸ್ತ ಹಾಗೂ ಸಾರಿಗೆ ನೌಕರರಿಗೆ ಕಲ್ಯಾಣ ಮಂಡಳಿಯ ಗುರುತು ಚೀಟಿ ನೀಡುತ್ತಿದೆ ಆದರೆ ಸಮರ್ಪಕ ಸೌಲಭ್ಯಗಳನ್ನು ಜಾರಿ ಮಾಡುವುದರಲ್ಲಿ ವಿಳಂಭ ನೀತಿ ಅನುಸರಿಸುತ್ತಿರುವುದು ಖಂಡನೀಯವಾಗಿದೆ ಮಾರ್ಚ್ ತಿಂಗಳ ಬಜೆಟ್ ನಲ್ಲಿ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಹಣ ನೀಡಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಮನೆಕಟ್ಟಲು ಸಹಾಯಧನ ಕೊಡಲು ಬಜೆಟ್ ನಲ್ಲಿ ಅನುದಾನ ನೀಡಬೇಕು,ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ, ಕನಿಷ್ಠ ಕೂಲಿ ಕೊಡಿಸಲು ಮುಂದಾಗಬೇಕು ಎಂದರು.
*ಬೇಡಿಕೆಗಳು*
1ಮುಂಬರುವ ಬಜೆಟ್ ನಲ್ಲಿ ಕಾರ್ಮಿಕರ ವರ್ಗಕ್ಕೆ ಮೀಸಲಿಡಬೇಕು.
2.ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ ಮತ್ತು ಕನಿಷ್ಠ ಕೂಲಿ ಕೊಡಬೇಕು.
3.ಕಲ್ಯಾಣ ಮಂಡಳಿ ರಚಿಸಿ ಗುರುತು ಚೀಟಿ ನೀಡಿದ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯಗಳನ್ನು ಜಾರಿ ಮಾಡಬೇಕು.
4.ಕೇಂದ್ರ ಸರ್ಕಾರ ತಂದಿರುವ 4 ಸಂಹಿತೆ ಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು.
5.ಕಟ್ಟಡ ಕಾರ್ಮಿಕರಿಗೆ ಬಜೆಟ್ ನಲ್ಲಿ ಮನೆಕಟ್ಟಲು ಸಹಾಯಧನಕ್ಕಾಗಿ ಹಣ ಕೊಡಬೇಕು.
6.ಬೆಲೆ ಏರಿಕೆ ಆಧಾರದಲ್ಲಿ ಕನಿಷ್ಠ ಕೂಲಿ 31566/- ಜಾರಿ ಮಾಡಬೇಕು.
7.ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು.
8.ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸುವುದು ಕೈ ಬಿಡಬೇಕು
9.ಎಲ್ಲಾ ಮಹಿಳೆಯರಿಗೆ ವರ್ಷದಲ್ಲಿ ಕನಿಷ್ಠ 12 ದಿನಗಳು ಸಂಬಳ ಸಹಿತ ಮುಟ್ಟಿನ ರಜೆ ಜಾರಿಗೊಳಿಸಬೇಕು.
10.ಎಲ್ಲಾ ಅಸಂಘಟಿತ ಕಾರ್ಮಿಕರಕಲ್ಯಾಣಕ್ಕಾಗಿ ಭವಿಷ್ಯ ನಿಧಿಗಾಗಿ ಕನಿಷ್ಠ 500 ಕೋಟಿ ಬಜೆಟ್ ನಲ್ಲಿ ನೀಡಬೇಕು.
11ಕಾರ್ಮಿಕರ ಎಲ್ಲಾ ಕಲ್ಯಾಣ ಮಂಡಳಿಗಳಲ್ಲಿ ಸಿಐಟಿಯು ಗೆ ಪ್ರಾತಿನಿಧ್ಯ ನೀಡಬೇಕು -ನೀಡಬೇಕು.
ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು .
ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮೂರು ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸಬೇಕು.
ಡಾಕ್ಟರ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು.
ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು.
*ಕಟ್ಟಡ ಸಾಮಗ್ರಿಗಳ ಸಮಸ್ಯೆಗೆ ಪ್ರತ್ಯೇಕ ಮನವಿ*
ಕೆಂಪು ಕಲ್ಲು, ಮರಳು ಶಿಲೆಕಲ್ಲು ಜೆಲ್ಲಿ ಮುಂತಾದ ಕಟ್ಟಡ ಸಾಮಾಗ್ರಿಗಳು ದೊರೆಯದೇ ಕಾರ್ಮಿಕರ ಕೆಲಸಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲೆಯ ಕಟ್ಟಡ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದರು ಸಮಸ್ಯೆ ಇತ್ಯರ್ಥ ಪಡಿಸಲು ಜಿಲ್ಲಾಡಳಿತ ಜಂಟಿ ಸಭೆ ಕರೆಯಲು ಒತ್ತಾಯಿಸಿದರು.
*ಅಂಗನವಾಡಿ ನೌಕರರ ಜಿಲ್ಲಾ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಮನವಿ*
ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿಗಳಲ್ಲಿ ಅನುಭವಿಸುತ್ತಿರುವ ಮೊಟ್ಟೆ ಖರೀದಿ ಸಮಸ್ಯೆ, ಗ್ಯಾಸ್ ಸಿಲಿಂಡರ್ ಸಮಸ್ಯೆ, ಹರಿದ ಸೀರೆ ಉಡಲು ಕಡ್ಡಾಯ ಮಾಡುತ್ತಿರುವುದರ ವಿರುದ್ಧ,ನೋಂದಣಿ ಮಾಡಲು ಪುಸ್ತಕಗಳನ್ನು ಇಲಾಖೆ ನೀಡದಿರುವ ಬಗ್ಗೆ,ಕಟ್ಟಡಗಳ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಪರಿಹರಿಸಲು ಮುಂದಾಗಬೇಕು ಎಂದು ಮನವಿ ನೀಡಿದರು.
ಧರಣಿಯನ್ನು ದ್ದೇಶಿಸಿ ಕೆ.ಶಂಕರ್, ಚಂದ್ರಶೇಖರ ವಿ, ಕವಿರಾಜ್ ಎಸ್ ಸುಶೀಲ ನಾಡ, ಶಶಿಧರ ಗೊಲ್ಲ, ವೆಂಕಟೇಶ್ ಕೋಣಿ,ಸದಾಶಿವ ಪೂಜಾರಿ,ಸಯ್ಯದ್ ಅಲಿ ಮುಂತಾದವರು ಮಾತನಾಡಿದರು.
ಬೀಡಿ ಕಾರ್ಮಿಕರ ಸಂಘದ ಉಮೇಶ್ ಕುಂದರ್, ಬಲ್ಕೀಸ್, ಕಟ್ಟಡ ಕಾರ್ಮಿಕರ ಸಂಘದ ಸುಭಾಷ್ ನಾಯಕ್,ರಾಮ ಕಾರ್ಕಡ, ರೊನಾಲ್ಡ್ ರಾಜೇಶ್ ಕ್ವಾಡ್ರಸ್,ಭಾರತಿ,ನಳಿನಿ, ಮೋಹನ್ ಮುಂತಾದವರಿದ್ದರು.