ಮಣಿಪಾಲ, 18 ಡಿಸೆಂಬರ್ 2024 – ಯುಕೆಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಡಿಸೆಂಬರ್ ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಉಪಶಾಮಕ ಆರೈಕೆಯ ವಿಶೇಷ ತಜ್ಞ ಡಾ. ನವೀನ್ ಎಸ್ ಸಾಲಿನ್ಸ್ ಅವರಿಗೆ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಪ್ರಶಸ್ತಿಯನ್ನು (ಅಲುಮ್ನಿ ಅವಾರ್ಡ್ ) ನೀಡಲಾಗಿದೆ ಎಂದು ಘೋಷಿಸಲು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹೆಮ್ಮೆಪಡುತ್ತದೆ. 2021 ರ ಬ್ಯಾಚ್ ನಲ್ಲಿ ಗ್ರಾಜುಯೇಟ್ ಕಾಲೇಜ್‌ನಿಂದ ಉಪಶಾಮಕ ಆರೈಕೆಯಲ್ಲಿ ಪಿಎಚ್‌ಡಿ ಪದವೀಧರರಾಗಿರುವ ಡಾ. ಸಾಲಿನ್ಸ್, ಭಾರತ ಮತ್ತು ಅದರಾಚೆಗೆ ಉಪಶಾಮಕ ಆರೈಕೆ ಮತ್ತು ಜೀವನ ಅಂತ್ಯದ ಆರೈಕೆಯನ್ನು ಮುನ್ನಡೆಸುವಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಡಾ ನವೀನ್ ಎಸ್ ಸಾಲಿನ್ಸ್ ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆಯ ಹಿರಿಯ ಸಲಹೆಗಾರರಾಗಿ, ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಕೆ ಎಂ ಸಿ ಮಣಿಪಾಲದ ಸಂಶೋಧನೆ ವಿಭಾಗದ ಅಸೋಸಿಯೇಟ್ ಡೀನ್, ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಸಾಲಿನ್ಸ್ ಅವರು ಭಾರತೀಯ ಉಪಖಂಡದಾದ್ಯಂತ ಉಪಶಾಮಕ ಆರೈಕೆ ಅಭ್ಯಾಸಗಳನ್ನು ಮರುರೂಪಿಸಿದ ಹಲವಾರು ಉಪಕ್ರಮಗಳನ್ನು ಮುನ್ನಡೆಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರ ನಾಯಕತ್ವವು ವಿಶೇಷವಾಗಿ ನಿರ್ಣಾಯಕವಾಗಿತ್ತು, ಅವರು ಕಾನೂನು ಕಾಳಜಿಯ ಕಾರಣದಿಂದ ನಿರರ್ಥಕ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳಲು ಇಷ್ಟವಿಲ್ಲದಿರುವಿಕೆಯನ್ನು ಪರಿಹರಿಸಲು ಅವರು ಒಂದು ಅದ್ಭುತ ಉಪಕ್ರಮವನ್ನು ಪ್ರಾರಂಭಿಸಿದರು. ಅವರ ಮಾರ್ಗದರ್ಶನದಲ್ಲಿ, ಭಾರತದಲ್ಲಿನ ಸಮಗ್ರ ರಾಷ್ಟ್ರೀಯ ಸಮೀಕ್ಷೆಯು ಹಲವಾರು ಹೆಚ್ಚುವರಿ ಉಪಶಾಮಕ ಆರೈಕೆ ಸೇವೆಗಳ ಸ್ಥಾಪನೆಗೆ ಕಾರಣವಾಯಿತು, ಅಗತ್ಯ ಆರೈಕೆಯ ಪ್ರವೇಶವನ್ನು ಗಮನಾರ್ಹವಾಗಿ ವಿಸ್ತರಿಸಿತು. ಅವರ ಪ್ರಯತ್ನಗಳು ಆರೋಗ್ಯ ರಕ್ಷಣೆ ನೀತಿ ಮತ್ತು ಸೇವಾ ವಿತರಣೆಯನ್ನು ಹೆಚ್ಚಿಸಿವೆ, ಲೆಕ್ಕವಿಲ್ಲದಷ್ಟು ಜೀವಗಳ ಮೇಲೆ ಪರಿಣಾಮ ಬೀರಿವೆ.
ಡಾ. ಸಾಲಿನ್ಸ್ ಅವರ ಸಮೃದ್ಧ ಶೈಕ್ಷಣಿಕ ವೃತ್ತಿಜೀವನವು 125 ಕ್ಕೂ ಹೆಚ್ಚು ಪೀರ್-ರಿವ್ಯೂಡ್ ಪ್ರಕಟಣೆಗಳು (ವಿದ್ವತ್ಪೂರ್ಣ ಅಥವಾ ರೆಫರಿಡ್ ಪ್ರಕಟಣೆಗಳು) ಮತ್ತು 50 ಕ್ಲಿನಿಕಲ್ ಸಂಶೋಧನಾ ಯೋಜನೆಗಳನ್ನು ಒಳಗೊಂಡಿದೆ. ಅವರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳಿಗೆ ಯುರೋಪಿಯನ್ ಅಸೋಸಿಯೇಷನ್ ಫಾರ್ ಪ್ಯಾಲಿಯೇಟಿವ್ ಕೇರ್ ಕ್ಲಿನಿಕಲ್ ಇಂಪ್ಯಾಕ್ಟ್ ಅವಾರ್ಡ್ ಮತ್ತು ಏಷ್ಯಾ ಪೆಸಿಫಿಕ್ ಸಿಂಥಿಯಾ ಗೋಹ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿದ್ದಾರೆ . ಅವರು ಕ್ಯಾನ್ಸರ್ ನ ಮಾನವ ಬಿಕ್ಕಟ್ಟಿನ ಲ್ಯಾನ್ಸೆಟ್ ಆಯೋಗದ ಆಯುಕ್ತರೂ ಆಗಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಮಾರ್ಗದರ್ಶಕರು ಮತ್ತು ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಹಾಗೂ ನವೀನ ಸಂಶೋಧನೆ ಮತ್ತು ಸಹಾನುಭೂತಿಯ ಸೇವೆಯ ಮೂಲಕ ಉಪಶಾಮಕ ಆರೈಕೆಯನ್ನು ಮುಂದುವರಿಸಲು ತಮ್ಮ ಸಮರ್ಪಣೆಯನ್ನು ಪುನರುಚ್ಚರಿಸಿದ್ದಾರೆ .
ಪ್ರತಿಷ್ಠಿತ ಅಲುಮ್ನಿ ಪ್ರಶಸ್ತಿಯು ಅವರ ಅಸಾಧಾರಣ ವೃತ್ತಿಪರ ಸಾಧನೆಗಳನ್ನು ಮತ್ತು ಉಪಶಾಮಕ ಆರೈಕೆಯಲ್ಲಿ ಜಾಗತಿಕ ಆರೋಗ್ಯ ಗುಣಮಟ್ಟವನ್ನು ಸುಧಾರಿಸಲು ಅವರ ಅಚಲ ಬದ್ಧತೆಯನ್ನು ತೋರಿಸುತ್ತದೆ. ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯದ ಚಾನ್ಸೆಲರ್, ಆರ್ಟಿ ಹಾನ್ ಅಲನ್ ಮಿಲ್ಬರ್ನ್ ಅವರು ಡಿಸೆಂಬರ್ ನಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು .
ಮಣಿಪಾಲದ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು, “ಡಾ. ನವೀನ್ ಸಾಲಿನ್ಸ್ ಅವರ ಸಮರ್ಪಣೆ ಮತ್ತು ಉಪಶಾಮಕ ಆರೈಕೆಯಲ್ಲಿನ ಅದ್ಭುತ ಕೆಲಸವು ಆರೋಗ್ಯ ಸೇವೆಗಳಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ದೊರೆತ ಮಾನ್ಯತೆಯು ಅವರ ಈ ಕ್ಷೇತ್ರದಲ್ಲಿ ನಾಯಕತ್ವ ಮತ್ತು ಅಸಾಧಾರಣ ಕೊಡುಗೆಗಳಿಗೆ ಸಾಕ್ಷಿಯಾಗಿದೆ.” ಎಂದಿದ್ದಾರೆ.
ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಅವರು “ಡಾ. ಸಾಲಿನ್ಸ್ ಅವರ ಸಾಧನೆಗಳ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಅವರ ಕೆಲಸವು ಭಾರತದಲ್ಲಿ ಉಪಶಾಮಕ ಆರೈಕೆಯಲ್ಲಿ ಪರಿವರ್ತಕ ಬದಲಾವಣೆಗಳನ್ನು ತಂದಿದೆ ಮತ್ತು ಈ ಪ್ರಶಸ್ತಿಯು ಅವರ ಶ್ರೇಷ್ಠತೆ ಮತ್ತು ಸಹಾನುಭೂತಿಯ ಸೇವೆ ನಿರಂತರ ಅನ್ವೇಷಣೆಯನ್ನು ಗುರುತಿಸುತ್ತದೆ” ಎಂದಿದ್ದಾರೆ.