ಉಡುಪಿ :ಡಿಸೆಂಬರ್ 16:ಬೀಡಿ ಎಲೆ ಸರಿಪಡಿಸಲು ಒತ್ತಾಯಿಸಿ ಇಂದು ಉಡುಪಿಯ ಭಾರತ್ ಬೀಡಿ ಕಂಪನಿಗೆ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ನಿಯೋಗ ಹೋಗಿ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ಕಂಪನಿಯ ಮಾನೆಜರ್ ಸದಾಶಿವ ಶೆಟ್ಟಿ ಕೂಡಲೇ ಮಾಲಕರಿಗೆ ಹೇಳಿ ಸರಿಪಡಿಸುವುದಾಗಿ ತಿಳಿಸಿದರು.
ಇತ್ತೀಚಿಗೆ ಭಾರತ್ ಬೀಡಿ ಕಂಪನಿಯು ಕಳಪೆ ಗುಣಮಟ್ಟದ ಬೀಡಿ ಎಲೆಗಳನ್ನು ಕಾರ್ಮಿಕರಿಗೆ ನೀಡುತ್ತಿದ್ದು ಕಾರ್ಮಿಕರು ತುಂಬಾ ಕಷ್ಟ ಅನುಭವಿಸುವಂತಾಗಿದೆ.ಎಲೆಗಳು ತುಂಬಾ ದಪ್ಪ ಹಾಗೂ ಕಳಪೆ ಇರುವುದರಿಂದ ಕಾರ್ಮಿಕರಿಗೆ ಬೀಡಿ ಕಟ್ಟಲು ಸಾಧ್ಯವಾಗುತ್ತಿಲ್ಲ.ಅರ್ಧದಷ್ಟು ಎವರೆಜ್ ಬರುತ್ತಾಇಲ್ಲ ಇದರಿಂದಾಗಿ ಸಿಕ್ಕಿದ ಸಂಬಳದಲ್ಲಿ ಅರ್ಧ ದಷ್ಟು ದಂಡ ಕಟ್ಟಬೇಕಾಗುತ್ತದೆ.ಬೀಡಿ ಕಟ್ಟಿ ಜೀವನ ಸಾಗಿಸುವುದು ತುಂಬಾ ಕಷ್ಟವಾಗುತ್ತಿದೆ.ಅದ್ದರಿಂದ ಭಾರತ್ ಬೀಡಿ ಕಂಪನಿಯ ಮಾಲಕರು ಕೂಡಲೇ ಯೋಗ್ಯ ವಾದ ಎಲೆಯನ್ನು ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಕಂಪನಿಗೆ ಮುತ್ತಿಗೆ ಹಾಕಲಾಗುವುದು ಎಂದು ಕಾರ್ಮಿಕ ಸಂಘದ ಮುಖಂಡರು ಎಚ್ಚರಿಸಿದ್ದಾರೆ.ನೀಯೊಗದಲ್ಲಿ ಬೀಡಿ ಅಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷ ರಾದ ನಳಿನಿ.ಎಸ್,ಕಾರ್ಯದರ್ಶಿ ಉಮೇಶ್ ಕುಂದರ್,ಕುಂದಾಪುರ ಬೀಡಿ ಕೆಲಸಗಾರ ಸಂಘದ ಕಾರ್ಯದರ್ಶಿ ಬಲ್ಕೀಸ್,ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ ದ ಕಾರ್ಯದರ್ಶಿ ಕವಿರಾಜ್. ಎಸ್,ಸಿಐಟಿಯು ಮುಖಂಡರಾದ ಮೋಹನ್,ವೆಂಕಟೇಶ್ ಕೋಣಿ,ಬೀಡಿ ಕಾರ್ಮಿಕ ಮುಖಂಡರಾದ ಗಿರಿಜಾ ಸಗ್ರಿ,ವಸಂತಿ ಇಂದಿರನಗರ ಉಪಸ್ಥಿತರಿದ್ದರು.