ಮಂಗಳೂರು: ಡಿಸೆಂಬರ್, 16 : ವಾಹನ ಗಳು ಬೆಂಕಿಗಾಹುತಿಯಾಗುತ್ತಿರುವ ಘಟನೆಗಳು ಇತೀಚಿನ ದಿನಗಳಲ್ಲಿ ಹೆಚ್ಚಾಗ್ತಾ ಇದ್ದು ಮಂಗಳೂರಿನ ಸಿಟಿ ಸೆಂಟರ್ ಸಮೀಪ ಇಂದು ಸೋಮವಾರ (ಡಿ.16) ಬೆಳಿಗ್ಗೆ ಮತ್ತೊಂದು ಕಾರು ಬೆಂಕಿಗಾಹುತಿಯಾಗಿದೆ.
ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರನ್ನು ಸಿಟಿ ಸೆಂಟರ್ ಬಳಿ ಇರುವ ಫ್ಲಾಟ್ ಬಳಿ ನಿಲ್ಲಿಸಿದ ವೇಳೆ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ ಇದಾದ ಕೆಲವೇ ಹೊತ್ತಿನಲ್ಲಿ ಕಾರು ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ.
ಸ್ಥಳೀಯರು ಅಗ್ನಿಶಾಮಕಕ್ಕೆ ಕರೆ ಮಾಡಿದ್ದು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಇತ್ತೀಚೆಗೆ ಲೇಡಿಹಿಲ್, ಕದ್ರಿ, ಅಡ್ಯಾರ್ ಮತ್ತು ಸುರತ್ಕಲ್ ಗಳಲ್ಲಿ ಕಾರುಗಳು ಬೆಂಕಿಗಾಹುತಿಯಾದ ಘಟನೆಗಳು ಸಂಭವಿಸಿತ್ತು.