ಉದ್ಯಾವರ: ಡಿಸೆಂಬರ್ 15:ಉದ್ಯಾವರ ಬೊಳ್ಜೆ ಎಂಬಲ್ಲಿ ಇಂದು ಬೆಳಗಿನ ಜಾವ ವೈಯಕ್ತಿಕ ಕಾರಣದಿಂದ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೊಳ್ಜೆಯ ಆದಿತ್ಯ(24)ಆತ್ಮಹತ್ಯೆ ಮಾಡಿಕೊಂಡ ಯುವಕ ಇವರು ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟ ತನ್ನ ಸ್ನೇಹಿತ ಸುಕ್ಷಿತ್ ಹೆಸರಿನಲ್ಲಿ ಕ್ರಿಕೆಟ್ ತಂಡವನ್ನು ಕಟ್ಟಿದ್ದರು. ಅಲ್ಲದೆ ಪೆರಂಪಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲೂ ಇವರು ಭಾಗವಹಿಸಿದ್ದರು.
ಅಲ್ಲಿಂದ ಮುಂಜಾನೆ 4:00ಯ ಬಳಿಕ ಮನೆಗೆ ಬಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಮುಂಜಾನೆ 4:00ಯ ಬಳಿಕ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ