ಉಡುಪಿ :ಡಿಸೆಂಬರ್ 12:ಉಡುಪಿ ಜಿಲ್ಲಾ ಪಂಚಾಯತ್‌ಗೆ ಶಿಕ್ಷಣ, ತೆರಿಗೆ ಸಂಗ್ರಹ, ಸುದೃಢ ಆಡಳಿತ ಸಹಿತ ವಿವಿಧ ವಿಭಾಗದಲ್ಲಿ ಶ್ರೇಷ್ಠ ಸಾಧನೆ ತೋರಿದಕ್ಕಾಗಿ ಕೇಂದ್ರ ಸರಕಾರದ ಪಂಚಾಯತ್ ರಾಜ್ ಇಲಾಖೆಯ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಜಿ.ಪಂ.ಸಿಇಒ ಪ್ರತೀಕ್ ಬಾಯಲ್ ಹಾಗೂ ಯೋಜನಾ ನಿರ್ದೇಶಕ ಶ್ರೀನಿವಾಸ್ ರಾವ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಾನಾಜಿ ದೇಶ್‌ಮುಖ್ ಸರ್ವೋತ್ತಮ ಪಂಚಾಯತ್ ಪ್ರಶಸ್ತಿಗೆ 3ನೇ ಅತ್ಯುತ್ತಮ ಜಿಲ್ಲೆಯಾಗಿ ಉಡುಪಿ ಆಯ್ಕೆಯಾಗಿತ್ತು. ಪ್ರಶಸ್ತಿಯು 2 ಕೋ.ರೂ. ನಗದು ಒಳಗೊಂಡಿದೆ.