ಮಂಗಳೂರು :ಡಿಸೆಂಬರ್ 12:ಹೊಸ ವರ್ಷದಲ್ಲಿ (2025)ದಲ್ಲಿ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರವಾಗಿ ಎರಡು ವಿಮಾನಗಳು ಸಂಚರಿಸಲಿವೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಜತೆಗೆ ಪುಣೆ ಮತ್ತು ದೆಹಲಿಗೂ ಕೂಡ ಹೊಸದಾಗಿ ಎರಡು ನೇರ ವಿಮಾನ ಸೇವೆಗಳು ಆರಂಭವಾಗಲಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ 21ರಿಂದ ವಾರದಲ್ಲಿ ಎರಡು ದಿನ (ಮಂಗಳವಾರ ಮತ್ತು ಶುಕ್ರವಾರ) ಮಂಗಳೂರಿನಿಂದ ಸಿಂಗಾಪುರಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸೌಲಭ್ಯ ಇರಲಿದೆ.