ಕಾರ್ಕಳ :ಡಿಸೆಂಬರ್ 10:ಕಥೊಲಿಕ್ ಸಭಾ ಕಾಕ೯ಳ ವಲಯ ಕಾಯ೯ಕತ೯ರಿಂದ ತಾ07.12.2024 ಶನಿವಾರದಂದು ಉಡುಪಿ, ಚಿಕ್ಕಮಗಳೂರು ಲೋಕಸಭಾ ಸಂಸದರಾದ ಶ್ರೀಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ನಂದಿಕೂರು, ಕಾಕ೯ಳ, ಉಜಿರೆ, ಬೆಳ್ತಂಗಡಿ, ಚಾಮಾ೯ಡಿ ಮುಖಾಂತರ ಹಳೆ ಮೂಡಿಗೆರೆಗೆ ಸಂಪಕಿ೯ಸುವ ರೈಲ್ವೆ ಯೋಜನೆ ಜಾರಿಗೊಳಿಸಲು ಇಂದು ಮಣಿಪಾಲ ರಜತಾದ್ರಿಯಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಲಯ ಮಾಜಿ ಅಧ್ಯಕ್ಷರು ಹಾಗೂ ರೈಲ್ವೆ ಸಂಚಾಲಕರಾದ ಶ್ರೀ ಮೆಕ್ಸಿಮ್ ಡಿ’ಮೆಲ್ಲೊ, ಕೆಂದ್ರೀಯ ಉಪಾಧ್ಯಕ್ಷ ಶ್ರೀ ಸೊಲೊಮನ್ ಆಲ್ವಾರಿಸ್, ಘಟಕ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಡಿ’ಮೆಲ್ಲೊ, ಸಮಾಜ ಸೇವಕರಾದ ಶ್ರೀ ಹೆನ್ರಿ ಸಾಂತ್ ಮಯೋರ್ ಉಪಸ್ಥಿತರಿದ್ದರು.