ಉಡುಪಿ :ಡಿಸೆಂಬರ್ 10:ದಿನನಿತ್ಯ ಆಹಾರ ಧಾನ್ಯ ಮತ್ತು ಅಗತ್ಯವಸ್ತುಗಳ ಬೆಲೆ ಹೆಚ್ಚಳ ಆಗುತ್ತಿದೆ. ಜನರ ಆದಾಯ ಕುಸಿಯುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಸಹಾಯಕ್ಕೆ ಧಾವಿಸಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಪರೀತ ತೆರಿಗೆಗಳನ್ನು ಹಾಕುತ್ತಿವೆ. ಕೇರಳದಲ್ಲಿ ನೀಡುತ್ತಿರುವಂತೆ 14 ಅಗತ್ಯ ವಸ್ತುಗಳನ್ನು ಮತ್ತು ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ, ಉಡುಪಿ ಜಿಲ್ಲಾ ಘಟಕದ ನಿಯೋಗವು ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಭಾಗವಾಗಿ ಉಡುಪಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ನೀಡಿತು.
ಬೇಡಿಕೆಗಳು:
1) ವರ್ಷಕ್ಕೆ 12 ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ನೀಡಬೇಕು
2) 14 ಅಗತ್ಯ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ನೀಡಬೇಕು
3) ವಯಸ್ಸಾದವರ, ದೈಹಿಕ ಶ್ರಮಜೀವಿಗಳ ಬೆರಳು ಸವೆತದಿಂದಾಗಿ ಬಯೋಮೆಟ್ರಿಕ್(ಥಂಬ್) ತೆಗೆದುಕೊಳ್ಳುವುದನ್ನು ನಿಲ್ಲಿಸಿ ಮೊದಲಿನಂತೆ ಓಟಿಪಿ ಜಾರಿಗೆ ತರಬೇಕು..ಇತ್ಯಾದಿ
ನಿಯೋಗದಲ್ಲಿ ಬಲ್ಕಿಸ್, ನಾಗರತ್ನ ನಾಡಾ, ನಾಡಾ ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ಮತ್ತಿತರರು ಭಾಗವಹಿಸಿದ್ದರು